ಮೊಸರಿನೊಂದಿಗೆ ಸಕ್ಕರೆ ಬೆರೆಸಿ ತಿಂದ್ರೆ reduce so many problems ! ನೀವೂ ಟ್ರೈ ಮಾಡಿ.

ಮೊಸರಿನೊಂದಿಗೆ ಸಕ್ಕರೆ ಬೆರೆಸಿ ತಿಂದ್ರೆ reduce so many problems ! ನೀವೂ ಟ್ರೈ ಮಾಡಿ.

ಮೊಸರು  ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂಬುದು ತಿಳಿದಿರುವ ವಿಚಾರ. ಇದು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದ್ದು, ಮೂಳೆಗಳನ್ನು ಬಲಪಡಿಸುತ್ತದೆ. ಮೊಸರಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಕರುಳನ್ನು ಆರೋಗ್ಯವಾಗಿಡುತ್ತವೆ. ಮಾತ್ರವಲ್ಲ ಇದರಲ್ಲಿ ವಿಟಮಿನ್ ಎ, ವಿಟಮಿನ್ ಬಿ 12 ಪೊಟ್ಯಾಸಿಯಮ್, ರಂಜಕ, ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಪ್ರೋಬಯಾಟಿಕ್ಗಳಂತಹ ಪೋಷಕಾಂಶಗಳು ಹೇರಳವಾಗಿವೆ. ಆದರೆ ಕೆಲವರು ಮೊಸರನ್ನು ಸಕ್ಕರೆಯೊಂದಿಗೆ ಸೇವಿಸುವುದನ್ನು ನೀವು ನೋಡಿರಬಹುದು. ಸಕ್ಕರೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಜನರು ರೀತಿಯ ಆಹಾರಗಳ ಸೇವನೆ ಮಾಡುವುದನ್ನೇ ನಿಲ್ಲಿಸುತ್ತಿದ್ದಾರೆ. ಆದರೆ ನಿಮಗೆ ತಿಳಿದಿರಲಿ, ಈ ರೀತಿಯಾಗಿ ಮೊಸರನ್ನು ಸೇವನೆ ಮಾಡುವುದರಿಂದ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ. ಹಾಗಾದರೆ ಈ ರೀತಿ ಮೊಸರಿಗೆ ಸಕ್ಕರೆ ಬೆರೆಸಿ ತಿನ್ನುವುದರಿಂದ ಆರೋಗ್ಯಕ್ಕೆ ಯಾವ ರೀತಿಯ ಲಾಭಗಳಿವೆ ಎಂಬುದನ್ನು ತಿಳಿದುಕೊಳ್ಳಿ.

ಮೊಸರಿಗೆ ಸಕ್ಕರೆ ಬೆರೆಸಿ ತಿನ್ನುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು:

•          ಮೊಸರಿಗೆ ಸಕ್ಕರೆ ಬೆರೆಸಿ ಸೇವನೆ ಮಾಡುವುದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈ ರೀತಿ ಮೊಸರು ಸೇವಿಸುವುದರಿಂದ ಮಾನಸಿಕ ಆರೋಗ್ಯ ಮಾತ್ರವಲ್ಲದೆ ದೈಹಿಕ ಆರೋಗ್ಯವೂ ಸುಧಾರಿಸುತ್ತದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.

•          ಮೊಸರಿನೊಂದಿಗೆ ಸಕ್ಕರೆ ಬೆರೆಸುವುದರಿಂದ ಗ್ಲೂಕೋಸ್ ಮಟ್ಟ ಹೆಚ್ಚಾಗುತ್ತವೆ. ಮಾತ್ರವಲ್ಲ ಮೊಸರು ಮತ್ತು ಸಕ್ಕರೆಯ ಮಿಶ್ರಣ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಕ್ಕೂ ಸಹಕಾರಿಯಾಗಿದೆ.

•          ಮೊಸರಿನೊಂದಿಗೆ ಸಕ್ಕರೆ ಬೆರೆಸಿ ಸೇವನೆ ಮಾಡುವುದರಿಂದ ಆ ಮಿಶ್ರಣ ನಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮಾತ್ರವಲ್ಲ ನಮ್ಮ ದೇಹದಿಂದ ವಿಷವನ್ನು ಹೊರಹಾಕಲು ಕೂಡ ಸಹಾಯ ಮಾಡುತ್ತದೆ.

•          ಮೊಸರು ಮತ್ತು ಸಕ್ಕರೆಯ ಮಿಶ್ರಣವನ್ನು ಮಕ್ಕಳಿಗೆ ನೀಡುವುದರಿಂದ ಅವರ ಸ್ಮರಣ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಆಯಾಸ, ಒತ್ತಡದಂತಹ ಸಮಸ್ಯೆಗಳು ಕೂಡ ಕಡಿಮೆ ಮಾಡುತ್ತದೆ.

•          ಮೊಸರಿಗೆ ಸಕ್ಕರೆ ಬೆರೆಸಿ ಸೇವನೆ ಮಾಡುವುದರಿಂದ ಶೀತ, ಜ್ವರ ಮತ್ತು ಕೆಮ್ಮಿನಂತಹ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

•          ಊಟದ ನಂತರ ಒಂದು ಕಪ್ ಮೊಸರಿನಲ್ಲಿ ಅರ್ಧ ಟೀ ಚಮಚ ಸಕ್ಕರೆ ಬೆರೆಸಿ ಸೇವಿಸುವುದರಿಂದ ಅಸಿಡಿಟಿ ಸಮಸ್ಯೆ ಸುಲಭವಾಗಿ ನಿವಾರಣೆಯಾಗುತ್ತದೆ.

•          ಈ ರೀತಿ ಮೊಸರನ್ನು ಸೇವನೆ ಮಾಡುವುದರಿಂದ ಹೊಟ್ಟೆ ಉರಿಯುವ ಸಮಸ್ಯೆ ತಕ್ಷಣವೇ ಕಡಿಮೆಯಾಗುತ್ತದೆ.

•          ದೇಹದ ಉಷ್ಣತೆ ಹೆಚ್ಚಿದ್ದರೆ, ಮೊಸರನ್ನು ಸಕ್ಕರೆಯೊಂದಿಗೆ ಸೇವಿಸುವುದರಿಂದ ದೇಹವು ತಂಪಾಗುತ್ತದೆ, ಮನಸ್ಸು ಶಾಂತವಾಗಿರುತ್ತದೆ.

•          ಮೊಸರನ್ನು ಸಕ್ಕರೆಯೊಂದಿಗೆ ಸೇವಿಸುವುದರಿಂದ ದೈಹಿಕ ಶಕ್ತಿ ಹೆಚ್ಚಾಗುತ್ತದೆ.

•          ಮೂತ್ರನಾಳದ ಸೋಂಕಿನ ಸಮಸ್ಯೆಗಳಿಂದ ಬಳಲುತ್ತಿರುವವರು ಮೊಸರು ಸಕ್ಕರೆಯ ಮಿಶ್ರಣವನ್ನು ಸೇವಿಸುವುದರಿಂದ ಉತ್ತಮ ಔಷಧಿಯಂತೆ ಕಾರ್ಯನಿರ್ವಹಿಸುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಈ ಸಮಸ್ಯೆ ಬೇಗನೆ ನಿವಾರಣೆಯಾಗುತ್ತದೆ.

•          ಮೊಸರನ್ನು ಸಕ್ಕರೆಯೊಂದಿಗೆ ಸೇವಿಸುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಕಡಿಮೆಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

Leave a Reply

Your email address will not be published. Required fields are marked *