ಅಂಡಾಶಯದ ಕ್ಯಾನ್ಸರ್, ಅಂಡಾಶಯದಲ್ಲಿ ಜೀವಕೋಶಗಳ ಅಸಹಜ ಬೆಳವಣಿಗೆಯಿಂದ ಉಂಟಾಗುತ್ತದೆ. ಈ ಜೀವಕೋಶಗಳು ವೇಗವಾಗಿ ದ್ವಿಗುಣಗೊಳ್ಳುತ್ತವೆ ಮತ್ತು ಆರೋಗ್ಯಕರ ದೇಹದ ಜೀವಕೋಶಗಳನ್ನು ನಾಶಮಾಡುತ್ತವೆ. ಅಂಡಾಶಯದ ಕ್ಯಾನ್ಸರ್ ಅನ್ನು ಆರಂಭದಲ್ಲಿ ಪತ್ತೆಹಚ್ಚುವುದು ಕಷ್ಟ ಮತ್ತು ಇದು ಗಂಭೀರವಾದಾಗ ಅಥವಾ ಚಿಕಿತ್ಸೆ ನೀಡಲು ಕಷ್ಟವಾದಾಗ ಮಾತ್ರ ಪತ್ತೆಯಾಗುತ್ತದೆ. ಆದಾಗ್ಯೂ, ಹೊಸ ಅಧ್ಯಯನವು ಅಂಡಾಶಯದ ಕ್ಯಾನ್ಸರ್ ಅನ್ನು ಆರಂಭದಲ್ಲಿ ಪತ್ತೆಹಚ್ಚಲು ಸಹಾಯ ಮಾಡುವ ನಾಲ್ಕು ಲಕ್ಷಣಗಳನ್ನು ಗುರುತಿಸಿದೆ.

ರೋಗನಿರ್ಣಯದಲ್ಲಿ ವಿಳಂಬ
ರೋಗವನ್ನು ಆರಂಭದಲ್ಲಿ ಪತ್ತೆಹಚ್ಚುವುದರಿಂದ ಬದುಕುಳಿಯುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಆಗಾಗ್ಗೆ, ರೋಗವು ದೇಹದ ಇತರ ಭಾಗಗಳಿಗೆ ಹರಡಿದ ನಂತರವೇ ರೋಗಿಗಳಿಗೆ ಚಿಕಿತ್ಸೆ ಸಿಗುತ್ತದೆ. ಅಂತಹ ಸಂದರ್ಭಗಳಲ್ಲಿ, ಬದುಕುಳಿಯುವ ಪ್ರಮಾಣವು ಗಣನೀಯವಾಗಿ ಕಡಿಮೆಯಾಗುತ್ತದೆ. ಅಂಡಾಶಯದ ಕ್ಯಾನ್ಸರ್ ರೋಗನಿರ್ಣಯವು ಸಾಮಾನ್ಯವಾಗಿ ವಿಳಂಬವಾಗುತ್ತದೆ ಏಕೆಂದರೆ ಅದರ ಲಕ್ಷಣಗಳು ಅಸ್ಪಷ್ಟವಾಗಿರುತ್ತವೆ ಮತ್ತು ಇತರ ಪರಿಸ್ಥಿತಿಗಳ ಲಕ್ಷಣಗಳನ್ನು ಅನುಕರಿಸಬಹುದು. ಆರಂಭದಲ್ಲಿ ಅಂಡಾಶಯದ ಕ್ಯಾನ್ಸರ್ ಪತ್ತೆಯಾದರೆ, ಚೇತರಿಕೆಯ ಸಾಧ್ಯತೆಗಳು 92 ಪ್ರತಿಶತದಷ್ಟು ಹೆಚ್ಚಿರುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ನ್ಸ್ಲ್ಯಾಂಡ್ ಬ್ರಿಸ್ಬೇನ್ ವಿಶ್ವವಿದ್ಯಾಲಯದ ಅಧ್ಯಯನವು ಅಂಡಾಶಯದ ಕ್ಯಾನ್ಸರ್ನ ಆರಂಭಿಕ ಹಂತಗಳನ್ನು ಗುರುತಿಸಲು ಸಹಾಯ ಮಾಡುವ ನಾಲ್ಕು ಪ್ರಮುಖ ಲಕ್ಷಣಗಳನ್ನು ಎತ್ತಿ ತೋರಿಸಿದೆ.
ನಾಲ್ಕು ಲಕ್ಷಣಗಳು-
• -ಹೊಟ್ಟೆ ಉಬ್ಬರ
• -ಊಟದ ನಂತರ ಬೇಗ ಹೊಟ್ಟೆ ತುಂಬಿದ ಅನುಭವ
• -ಹೆಚ್ಚಾಗಿ ಮೂತ್ರ ವಿಸರ್ಜನೆ
• -ಹೊಟ್ಟೆ ನೋವು; ಈ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.