ಕರ್ನಾಟಕ ಸರ್ಕಾರವು ಚಿತ್ರಮಂದಿರಗಳಲ್ಲಿ ಚಲನಚಿತ್ರ ಟಿಕೆಟ್ಗಳ ಗರಿಷ್ಠ ಬೆಲೆಯನ್ನು 200 ರೂಪಾಯಿಗೆ ಸೀಮಿತಗೊಳಿಸುವ ಆದೇಶ ಹೊರಡಿಸಿದೆ. ಈ ಆದೇಶವನ್ನು ಚಿತ್ರರಂಗದ ಕೆಲವರು ಸ್ವಾಗತಿಸಿದರೆ, ದೊಡ್ಡ ನಿರ್ಮಾಣ ಸಂಸ್ಥೆಗಳು ಮತ್ತು ನಟರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಪ್ರದರ್ಶಕರ ಸಂಘದ ಅಧ್ಯಕ್ಷರು ಈ ಆದೇಶವನ್ನು ಸ್ವಾಗತಿಸಿ, ಕನ್ನಡ ಚಿತ್ರರಂಗಕ್ಕೆ ಇದು ಒಳ್ಳೆಯದು ಎಂದಿದ್ದಾರೆ.

‘ನಾವು ಸರ್ಕಾರದ ಆದೇಶವನ್ನ ಸ್ವಾಗತ ಮಾಡುತ್ತೇವೆ. ನಾವು ಇದಕ್ಕಾಗಿ ತುಂಬಾ ಹೋರಾಟ ಮಾಡಿದ್ದೆವು. ಇದರಿಂದ ನಶಿಸಿ ಹೋಗುತ್ತಿರುವ ಕನ್ನಡ ಚಿತ್ರರಂಗಕ್ಕೆ ಒಳ್ಳೆಯದಾಗುತ್ತದೆ. ಎಲ್ಲರೂ ಇದನ್ನು ಸ್ವಾಗತ ಮಾಡಬೇಕು. ಮಲ್ಟಿಪ್ಲೆಕ್ಸ್ ಹಾಗೂ ಕನ್ನಡ ಚಿತ್ರರಂಗದವರಿಂದ ಇದಕ್ಕೆ ಆಕ್ಷೇಪ ಇದ್ದರೆ ಇನ್ನು 15 ದಿನದಲ್ಲಿ ಹೇಳಬೇಕಾಗುತ್ತದೆ’ ಎಂದು ಅವರು ಹೇಳಿದ್ದಾರೆ.
‘ಅಣ್ಣಾವ್ರು ವಿಷ್ಣುವರ್ಧನ್ ಹಾಗೂ ಅಂಬರೀಷ್ ಅವರ ಸಿನಿಮಾಗಳು ಬರೋವಾಗ ಟಿಕೆಟ್ ಬೆಲೆ 50 ರೂಪಾಯಿ ಇತ್ತು. ಆಗಲೇ ಅವರು ದೊಡ್ಡ ಸ್ಟಾರ್ ಆದರೂ ಆಕ್ಷೇಪ ವ್ಯಕ್ತಪಡಿಸಿರಿಲಿಲ್ಲ’ ಎಂದಿದ್ದಾರೆ ಚಂದ್ರಶೇಖರ್.