“ಚಿಕ್ಕಬೂದಿಹಾಳ: ಹಾವುಗಳೆಂದರೆ ಬಹುತೇಕ ಎಲ್ಲರಿಗೂ ಸಿಕ್ಕಾಪಟ್ಟೆ ಭಯ. ಇವುಗಳು ವಿಷಕಾರಿ ಜೀವಿಗಳಾಗಿರುವುದರಿಂದ ಅವುಗಳು ಕಚ್ಚಿದರೆ ಪ್ರಾಣಕ್ಕೆ ಅಪಾಯ ಖಂಡಿತ ಎಂದು ಹೆಚ್ಚಿನವರು ಹಾವನ್ನು ದೂರದಿಂದ ಕಂಡರೂ ಓಡಿ ಹೋಗ್ತಾರೆ. ಹೀಗೆ ಹಾವನ್ನು ಕಂಡ್ರೆ ಭಯ ಪಡುವವರು ಒಂದು ಕಡೆಯಾದ್ರೆ, ಯಾವುದೇ ಭಯವಿಲ್ಲದೆ ನಿರ್ಭೀತಿಯಿಂದ ದೈತ್ಯ ವಿಷಕಾರಿ ಹಾವುಗಳನ್ನು ಸಹ ಬರಿ ಗೈಲಿ ಹಿಡಿಯುವವರಿದ್ದಾರೆ. ಅದೇ ರೀತಿ ಇಲ್ಲೊಬ್ರು ವ್ಯಕ್ತಿ ಮನೆಯ ಹೆಂಚಿನ ಮೇಲೆ ಹೆಡೆ ಎತ್ತಿ ಕುಳಿತಿದ್ದ 5 ಅಡಿ ಉದ್ದದ ನಾಗರಹಾವನ್ನು ಸಲೀಸಾಗಿ ಹಿಡಿದು ರಕ್ಷಣೆ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಈ ವ್ಯಕ್ತಿಯ ಧೈರ್ಯಯವನ್ನು ಕಂಡು ನೋಡುಗರು ಬೆರಗಾಗಿದ್ದಾರೆ.

ಆಹಾರವನ್ನರಸುತ್ತಾ ಜನವಸತಿ ಪ್ರದೇಶಗಳ ಕಡೆಗೆ ಹಾವುಗಳು ಬರುವಂತಹದ್ದು ಸಾಮಾನ್ಯ. ಹೀಗೆ ಮನೆ ಬಳಿ ಹಾವುಗಳು ಬಂದ್ರೆ ಜನ ಭಯ ಬಿದ್ದು ಓಡಿ ಹೋಗ್ತಾರೆ. ಇಲ್ಲೊಂದು ಕಡೆ ಅದೇ ರೀತಿ ದೈತ್ಯ ನಾಗರ ಹಾವು ಬಂದಿದ್ದು, ಮನೆಯ ಹೆಂಚಿನ ಮೇಲೆ ಕುಳಿತಿದ್ದ 5 ಅಡಿ ಉದ್ದದ ಈ ಹಾವನ್ನು ಉರಗ ರಕ್ಷಕರೊಬ್ಬರು ರಕ್ಷಣೆ ಮಾಡಿದ್ದಾರೆ.

ಸಲೀಸಾಗಿ ನಾಗರಹಾವು ಹಿಡಿದ ಧೀರ:
ಹಾವುಗಳನ್ನು ಕಂಡರೆ ಭಯ ಬಿದ್ದು ಓಡಿ ಹೋಗುವವರೇ ಹೆಚ್ಚು. ಆದರೆ ಈ ವ್ಯಕ್ತಿ ಹೂವು ಹಿಡಿದಂತೆ ಸಲೀಸಾಗಿ ನಾಗರಹಾವನ್ನು ಹಿಡಿದಿದ್ದಾರೆ. ಮನೆಯೊಂದರ ಹೆಂಚಿನ ಮೇಲೆ ಹೆಡೆ ಎತ್ತಿ ಕುಳಿತಿದ್ದಂತಹ 5 ಅಡಿ ಉದ್ದದ ಈ ನಾಗರಹಾವನ್ನು ಹಿಡಿದು ರಕ್ಷಣೆ ಮಾಡಿದ್ದಾರೆ.