ಬೆಂಗಳೂರು || ಚಿನ್ನಾಭರಣ ಕದಿಯುತ್ತಿದ್ದ ನಾಲ್ವರು ಮಹಿಳೆಯರ ಬಂಧನ..!

ಬೆಂಗಳೂರುಜನಸಂದಣಿ ಪ್ರದೇಶಗಳಲ್ಲಿ ಚಿನ್ನಾಭರಣ ಕಳವು ಮಾಡುತ್ತಿದ್ದ ಆರೋಪದಡಿ ನಾಲ್ವರು ಮಹಿಳಾ ಆರೋಪಿಗಳನ್ನು ಬಾಣಸವಾಡಿ ಠಾಣೆ ಪೊಲೀಸರು ಸೆರೆಹಿಡಿದಿದ್ಧಾರೆ.

ಯಶೋಧ, ಗಾಯತ್ರಿ, ಆಶಾ ಹಾಗೂ ಪ್ರಿಯ ಎಂಬುವರನ್ನು ಬಂಧಿಸಿ 14 ಲಕ್ಷ ಮೌಲ್ಯದ 140 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ನಾಲ್ವರು ಮಹಿಳೆಯರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದ್ಧಾರೆ.

ಕಳೆದ ತಿಂಗಳು 29ರಂದು ಬಾಣಸವಾಡಿಯಲ್ಲಿ ನಡೆದ ಜಗನ್ನಾಥಸ್ವಾಮಿ ರಥೋತ್ಸವ ವೇಳೆ ದೂರುದಾರ ಮಹಿಳೆಯು ಪಾಲ್ಗೊಳ್ಳಲು ಬಂದಾಗ ನಾಲ್ವರು ಮಹಿಳೆಯರು ತಮ್ಮ ಕರಾಮತ್ತು ತೋರಿಸಿ ಮಹಿಳೆ ಧರಿಸಿದ್ದ 48 ಗ್ರಾಂ ಚಿನ್ನದ ಮಾಂಗಲ್ಯ ಸರ ಎಗರಿಸಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿತರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ಧಾರೆ.

ಜನಸಂದಣಿ ಪ್ರದೇಶಗಳಲ್ಲಿ ಕಳ್ಳತನ ಮಾಡುವುದನ್ನು ಮಹಿಳೆಯರು ಸಿದ್ಧಿಸಿಕೊಂಡಿದ್ದರು. ನಾಲ್ವರು ಆನೇಕಲ್ ಭಾಗದವರಾಗಿದ್ದು, ವ್ಯವಸ್ಥಿತ ಸಂಚು ರೂಪಿಸಿ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಪ್ರಕರಣದ ಮೊದಲ ಆರೋಪಿತೆ ಯಶೋಧಾ ವಿರುದ್ಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೆ ಗಾಯತ್ರಿ ವಿರುದ್ಧ ಐದು ಪ್ರಕರಣ ಹಾಗೂ ಇನ್ನಿಬ್ಬರ ವಿರುದ್ಧ ಒಂದೊಂದು ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *