ಹ*ತ್ಯೆಗೆ ಪ್ರಮುಖ ಕಾರಣ ಪತ್ತೆ ಮಾಡಿದ Police ! ಮತ್ತಷ್ಟು ರೋಚಕ ಅಂಶ ಬಯಲು..!

ಹ*ತ್ಯೆಗೆ ಪ್ರಮುಖ ಕಾರಣ ಪತ್ತೆ ಮಾಡಿದ Police ! ಮತ್ತಷ್ಟು ರೋಚಕ ಅಂಶ ಬಯಲು..!

ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣ ಸಂಬಂಧ ಪೊಲೀಸರ ತನಿಖೆಯಲ್ಲಿ ಮತ್ತಷ್ಟು ಸ್ಫೋಟಕ ಸಂಗತಿಗಳು ಬೆಳಕಿಗೆ ಬಂದಿವೆ. ಬಿಕ್ಲು ಶಿವ ಕೊಲೆಯಾಗಲು ಪ್ರಮುಖ ಕಾರಣ ಏನು ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಕೊಲೆಗೆ ಸುಪಾರಿ ಪಡೆದಿದ್ದ ಗ್ಯಾಂಗ್ ಅನ್ನೂ ಬಲೆಗೆ ಕೆಡವಿದ್ದಾರೆ.

ಶಾಸಕ ಭೈರತಿ ಬಸವರಾಜ್ ವಿರುದ್ಧ ಸಾಕ್ಷ್ಯ ಸಿಕ್ಕರೆ ಬಂಧನ ಸಾಧ್ಯತೆ

ಸದ್ಯ ಪೊಲೀಸರು ರೌಡಿ ಶೀಟರ್ ಬಿಕ್ಲುವನ್ನು ಕೊಂದ ಆರೋಪಿಗಳ ಜಾತಕ ಜಾಲಾಡುತ್ತಿದ್ದಾರೆ. ಇದೀಗ ಕೊಲೆ ಪ್ರಕರಣದಲ್ಲಿ A5 ಆಗಿರುವ ಬಿಜೆಪಿ ಶಾಸಕ ಭೈರತಿ ಬಸವರಾಜ್ ವಿರುದ್ಧ ಪೊಲೀಸರು ಸಾಕ್ಷ್ಯ ಪತ್ತೆಗೆ ಮುಂದಾಗಿದ್ದಾರೆ. ಇಂದು ಭೈರತಿ ಬಸವರಾಜ್ಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಏನಾದರೂ ಸಾಕ್ಷ್ಯ ಸಿಕ್ಕಿದರೆ ಭೈರತಿ ಬಸವರಾಜ್ರನ್ನು ಬಂಧಿಸುವ ಸಾಧ್ಯತೆ ಇದೆ.

ಒಂದೂವರೆ ಲಕ್ಷ ಸುಪಾರಿ ತೆಗೆದುಕೊಂಡು ಮರ್ಡರ್!

ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಕೊಲೆ ಮಾಡಲು ಕೇವಲ ಒಂದೂವರೆ ಲಕ್ಷ ರೂಪಾಯಿ ಸುಪಾರಿ ಪಡೆದಿದ್ದ ಗ್ಯಾಂಗ್ ಅಂದರ್ ಆಗಿದೆ. ಕೋಲಾರದ ಮಾಲೂರು ಮೂಲದ ನರಸಿಂಹ, ಮುರುಗೇಶ್, ಸುದರ್ಶನ, ಅವಿನಾಶ್ ದಿನ್ನಹಳ್ಳಿ ಎಂಬ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ಬಂಧಿತನಾಗಿರುವ ವಿಮಲ್ ಎಂಬ ಆರೋಪಿ ಮೂಲಕ ನರಸಿಂಹನಿಗೆ ಸುಪಾರಿ ನೀಡಲಾಗಿತ್ತು ಎಂಬ ಅಂಶ ಬಯಲಾಗಿದೆ. ಇಷ್ಟೇ ಅಲ್ಲ ಕೊಲೆಗೆ ಬಳಸಿದ್ದಸ್ಕಾರ್ಪಿಯೋ ಕಾರನ್ನು ಎರಡೂವರೆ ಲಕ್ಷ ರೂಪಾಯಿ ಕೊಟ್ಟು ರೆಡ್ಡಿ ಎಂಬುವವರ ಬಳಿ ಕನ್ನಡಪರ ಹೋರಾಟಗಾರ ಕಂ ನಟ ಆರ್.ಡಿ ಅನಿಲ್ ಖರೀದಿ ಮಾಡಿ ಕಿರಣ್ಗೆ ಕೊಟ್ಟಿದ್ದ ಎನ್ನಲಾಗಿದೆ.

ಬಿಕ್ಲು ಶಿವನ ಹತ್ಯೆಗೆ ಪ್ರಮುಖ ಕಾರಣ ಪತ್ತೆ ಮಾಡಿದ ಪೊಲೀಸರು

ಬಿಕ್ಲು ಶಿವ ಕೊಲೆಯ ಪ್ರಮುಖ ಕಾರಣವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಬಿಕ್ಲು ಶಿವ ಪದೇಪದೆ ಫೇಸ್ಬುಕ್ ಲೈವ್ನಲ್ಲಿ ಬಂದು ರೌಡಿಶೀಟರ್ ಜಗ್ಗನ ವಿರುದ್ಧ ಬೈಯುತ್ತಿದ್ದನಂತೆ. ಅಷ್ಟೇ ಅಲ್ಲದೆ, ಹಿಂದೆ ಕೋರ್ಟ್ನಲ್ಲಿ ಒಮ್ಮೆ ಮುಖಾಮುಖಿಯಾದಾಗ ಇಬ್ಬರ ನಡುವೆ ಮಾತಿನ ಚಕಮಕಿ ಸಹ ಆಗಿತ್ತು. ಈ ವೇಳೆ, ‘‘ಏನು ಮಾಡ್ಕೋತಿಯೋ ಮಾಡ್ಕೋ’’ ಎಂದು ಬಿಕ್ಲು ಶಿವ ಆವಾಜ್ ಹಾಕಿದ್ದನಂತೆ. ಹೀಗಾಗಿ ಜಗ್ಗ ಬಿಕ್ಲುವನ್ನು ಕೊಲೆ ಮಾಡಲು ಸಂಚು ಹೂಡಿದ್ದ ಎಂಬ ವಿಚಾರ ಗೊತ್ತಾಗಿದೆ.

Leave a Reply

Your email address will not be published. Required fields are marked *