ಸಂಗೀತ ಸಂಯೋಜಕ, ಗೀತ ಸಾಹಿತಿ ಕೆ. ಕಲ್ಯಾಣ್ ಅವರು ಸದಾ ಆ್ಯಕ್ಟೀವ್ ಆಗಿರುತ್ತಾರೆ. ಅವರು ಎಂದಿಗೂ ಆಫರ್ಗಾಗಿ ಕಾದು ಕುಳಿತವರಲ್ಲವಂತೆ. ‘ನಾನು ಆಫರ್ ಬರುತ್ತದೆ ಎಂದು ಯಾವಾಗಲೂ ಕಾಯುತ್ತ ಕೂರುವುದಿಲ್ಲ.

ನಾನು ಸದಾ ಆ್ಯಕ್ಟೀವ್ ಆಗಿರುತ್ತೇನೆ. ಆಫರ್ ಬಂದಾಗ ಒಪ್ಪಿ ಮಾಡುತ್ತೇನೆ. ನಾನು ಯುದ್ಧ ಬಂದಾಗ ಶಸ್ತ್ರಾಸ್ತ್ರಾಭ್ಯಾಸ ಮಾಡುವುದಿಲ್ಲ. ಅದಕ್ಕಾಗಿ ಸದಾ ಸಿದ್ಧನಾಗೇ ಇರುತ್ತೇನೆ’ ಎನ್ನುತ್ತಾರೆ ಅವರು.