ಬೆಂಗಳೂರು : ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರು ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ವಿಚಾರದ ಬಗ್ಗೆ ಪ್ರಥಮ್ ಮಾತನಾಡಿದ್ದಾರೆ. ಈ ಮೊದಲು ಸಂದರ್ಶನ ಒಂದರಲ್ಲಿ ಮಾತನಾಡುವಾಗ ದರ್ಶನ್ ಎಡವಟ್ಟೊಂದನ್ನು ಮಾಡಿಕೊಂಡಿದ್ದರು. ‘ಅದೃಷ್ಟದೇವತೆ ಬಂದರೆ ಅದರ ಬಟ್ಟೆ ಬಿಚ್ಚಿಸಿ ರೂಂನಲ್ಲಿ ಕೂಡಿ ಹಾಕಬೇಕು. ಆಗ ಅದು ಎಲ್ಲಿಯೂ ಹೋಗಲ್ಲ’ ಎಂಬರ್ಥದಲ್ಲಿ ಮಾತನಾಡಿದ್ದರು. ಈ ವಿಚಾರವನ್ನು ಪ್ರಥಮ್ ಉಲ್ಲೇಖಿಸಿದ್ದಾರೆ.
‘ದರ್ಶನ್ ಕಾಮಾಕ್ಯ ದೇವಸ್ಥಾನಕ್ಕೆ ಹೋಗಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಈ ಮೊದಲು ಅದೃಷ್ಟ ಲಕ್ಷ್ಮಿ ಬಂದರೆ ಬಟ್ಟೆ ಬಿಚ್ಚಿಸಿ ರೂಂನಲ್ಲಿ ಕೂಡಿ ಹಾಕ್ತಿನಿ ಎಂದವರು ಈಗ ಹೋಗಿ ಕಾಮಾಕ್ಯ ದೇವರಿಗೆ ವಂದಿಸುತ್ತಿದ್ದಾರೆ’ ಎಂದಿದ್ದಾರೆ ಪ್ರಥಮ್.