‘ಸು ಫ್ರಮ್ ಸೋ’ ಸಿನಿಮಾಗೆ ದೊಡ್ಡ ಯಶಸ್ಸು ಸಿಕ್ಕಿದೆ. ಚಿತ್ರದ ‘ಬಾವ ಬಂದರೋ..’ ಹಾಡಿಗೆ ರಾಜ್ ಬಿ ಶೆಟ್ಟಿ ಮತ್ತು ತಂಡ ಸ್ಟೆಪ್ಸ್ ಹಾಕಿದೆ. ಈ ವಿಡಿಯೋ ವೈರಲ್ ಆಗಿದೆ. ಚಿತ್ರದ ಯಶಸ್ಸು ಮತ್ತು ಈ ಹಾಡಿನ ಜನಪ್ರಿಯತೆಯಿಂದ ನಿರ್ಮಾಪಕರು ಖುಷಿಯಾಗಿದ್ದಾರೆ.
‘ಸು ಫ್ರಮ್ ಸೋ’ ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. ಈ ಚಿತ್ರದ ಸಕ್ಸಸ್ನಕದ ರಾಜ್ ಬಿ ಶೆಟ್ಟ ಹಾಗೂ ಟೀಂ ಖುಷಿಪಟ್ಟಿದೆ. ಮೊದಲ ಪ್ರಯತ್ನದಲ್ಲೇ ನಿರ್ದೇಶಕ ಜೆಪಿ ತುಮಿನಾಡ್ ಅವರು ಸಾಕಷ್ಟು ದೊಡ್ಡ ಗೆಲುವು ಕಂಡಿದ್ದಾರೆ. ಈ ಚಿತ್ರದಲ್ಲಿ ಬರೋ ‘ಬಂದರು ಬಂದರು ಬಾವ ಬಂದರು..’ ಹಾಡಿಗೆ ಈಗ ತೂಕ ಬಂದಿದೆ. ಇದಕ್ಕೆ ಕಾರಣ ರಾಜ್ ಬಿ. ಶೆಟ್ಟಿ ಹಾಗೂ ಗ್ಯಾಂಗ್ ಈ ಹಾಡಿಗೆ ಸ್ಟೆಪ್ ಹಾಕಿದ್ದಾರೆ.
ಸಿನಿಮಾದಲ್ಲಿ ಬರೋ ‘ಬಾವ’ ಪಾತ್ರ ತುಂಬಾನೇ ಪ್ರಾಮುಖ್ಯತೆ ಪಡೆದಿದೆ. ತೆರೆಮೇಲೆ ಇದ್ದಷ್ಟು ಹೊತ್ತು ನಗಿಸುವ ಕೆಲಸವನ್ನು ಈ ಪಾತ್ರ ಮಾಡುತ್ತದೆ. ‘ಬಂದರು ಬಂದರು ಬಾವ ಬಂದರು..’ ಹಾಡನ್ನು ವಿಶೇಷವಾಗಿ ಬಾವನಿಗಾಗಿಯೇ ಸಂಯೋಜಿಸಲಾಗಿದೆ. ಈ ಕಾರಣದಿಂದಲೇ ಬಾವನ ಎಂಟ್ರಿ ವಿಶೇಷ ಎನಿಸಿಕೊಂಡಿದೆ. ಅಲ್ಲದೆ, ಸಾಂಗ್ ಕೂಡ ಫೇಮ್ ಆಗಿದೆ.
ಈಗ ರಾಜ್ ಬಿ ಶೆಟ್ಟಿ, ಶನೀಲ್ ಗೌತಮ್ ಹಾಗೂ ನಟ, ನಿರ್ದೇಶಕ ಜೆಪಿ ತುಮಿನಾಡ ಅವರು ಈ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಯಾವುದೇ ಕೊರಿಯೋಗ್ರಫಿ ಇಲ್ಲದೆ, ತಮ್ಮದೆ ಸ್ಟೈಲ್ನಲ್ಲಿ ರಸ್ತೆ ಮೇಲೆ ‘ಬಾವ’ ಹಾಡಿಗೆ ಸ್ಟೆಪ್ ಹಾಕಿದ್ದಾರೆ ಇವರು. ಈ ವಿಡಿಯೋ ಸಖತ್ ವೈರಲ್ ಆಗಿ ಗಮನ ಸೆಳೆದಿದೆ.




