ಉತ್ತರ ಕನ್ನಡ : ಏನೂ ಅಲ್ಲದ ಸ್ಥಿತಿಯಿಂದ ಲೈಮ್ಲೈಟ್ಗೆ, ಅಲ್ಲಿಂದ ಪುನಃ ವಾಪಸ್ಸು ಏನೂ ಅಲ್ಲದ ಸ್ಥಿತಿಗೆ! ಪ್ರಾಯಶಃ ಬದುಕಿನಲ್ಲಿ ಜಿಗುಪ್ಸೆ ಹೊಂದಿ ಖಿನ್ನತೆಯನ್ನು ಹೊದ್ದು ಹತಾಷೆಯ ಕೂಪದಲ್ಲಿ ಬೀಳಲು ಕಾಮಿಡಿ ಖಿಲಾಡಿಗಳು ಕನ್ನಡ ರಿಯಾಲಿಟಿ ಶೋ ಕಲಾವಿದ ಚಂದ್ರಶೇಖರ್ ಸಿದ್ದಿಗೆ ಅಷ್ಟು ಸಾಕಿತ್ತು. ಜಿಲ್ಲೆಯ ಯಲ್ಲಾಪುರ ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಚಿಮನಹಳ್ಳಿ ಸಿದ್ದಿ ಜನಾಂಗದ ಯುವಕ ಚಂದ್ರಶೇಖರ್ ದುಡುಕಿದರು ಅನ್ನೋದು ಸ್ಪಷ್ಟವಾಗುತ್ತದೆ.
ಆತ್ಮಹತ್ಯೆಯ ಮೂಲಕ ಬದುಕಿಗೆ ವಿದಾಯ ಹೇಳುವಂಥ ಸನ್ನಿವೇಶವೇನೂ ಸೃಷ್ಟಿಯಾಗಿರಲಿಲ್ಲ. ಕಾಮಿಡಿ ಖಿಲಾಡಿಗಳೂ ರಿಯಾಲಿಟಿ ಶೋ ಆದರೂ ಬಣ್ಣದ ಬದುಕು ಅವರಲ್ಲಿ ಕನಸುಗಳು ಮೂಡಲು ಕಾರಣವಾಗಿತ್ತು. ಆದರೆ ಕನಸುಗಳು ನನಸಾಗುವ ಲಕ್ಷಣಗಳು ಕಾಣದೆ ಹೋದಾಗ ಅವರಿಗೆ ಹೊಳೆದ ಮಾರ್ಗ ಯಾವ ದೃಷ್ಟಿಯಿಂದಲೂ ಸರಿಯಲ್ಲ.