ಮೈಸೂರು: ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಮಗ ಪ್ರಿಯಾಂಕ್ ಖರ್ಗೆ ತಮಗೆ ಸಂಬಂಧವಿರದ ವಿಷಯಗಳ ಬಗ್ಗೆ ಹೆಚ್ಚು ಮಾತಾಡುತ್ತಾರೆಯೇ ಹೊರತು ತಮಗೆ ಸಂಬಂಧಿಸಿದ ಸಂಗತಿಗಳ ಬಗ್ಗೆ ಮಾತಾಡಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಗೇಲಿ ಮಾಡಿದರು.
ಪ್ರಿಯಾಂಕ್ ಖರ್ಗೆ ತಮ್ಮ ಇಲಾಖೆಯ ಬಗ್ಗೆ ಯಾವತ್ತೂ ಮಾತಾಡಲ್ಲ, ಶಾಲಾ ಮಕ್ಕಳನ್ನು ಕರೆತಂದು ಸಾಲಲ್ಲಿ ನಿಲ್ಲಿಸಿ ಫೋಟೋ ತೆಗೆದು ಅವರನ್ನು ನರೇಗಾ ಯೋಜನೆಯ ಕೆಲಸಗಾರರು ಅಂತ ಹೇಳಿದ್ದಕ್ಕೆ ಬಿಜೆಪಿ ಶಾಸಕ ರಾಜೀವ್ ಕುಡಚಿ ಕೆಲ ಪ್ರಶ್ನೆಗಳನ್ನು ಕೇಳಿದ್ದರು, ಪ್ರಿಯಾಂಕ್ ಉತ್ತರ ಕೊಡಲೇ ಇಲ್ಲ ಎಂದು ಸಿಂಹ ಹೇಳಿದರು. ಮಲ್ಲಿಕಾರ್ಜುನ ಖರ್ಗೆ 8 ಸಲ ಶಾಸಕ, ಒಮ್ಮೆ ಎಂಪಿ ಮತ್ತೀಗ ರಾಜ್ಯಸಭಾ ಸದಸ್ಯರಾಗಿದ್ದಾರೆ, ಅವರ ಮಗ ಮೂರು ಸಲ ಗೆದ್ದಿದ್ದಾರೆ, ಅದರೂ ಎಸ್ಎಸ್ಎಲ್ಸಿ ಪರೀಕ್ಷೆಗಳ ಫಲಿತಾಂಶದಲ್ಲಿ ಕಲಬುರಗಿ ಕೆಳಗಿನಿಂದ ಎರಡನೇ ಸ್ಥಾನದಲ್ಲಿರುತ್ತದೆ ಎಂದು ಪ್ರತಾಪ್ ಹೇಳಿದರು.
For More Updates Join our WhatsApp Group :