ಬೆಂಗಳೂರು: ಬೆಂಗಳೂರು ನಗರದಲ್ಲಿಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮಾತಾಡಿ ನಿನ್ನೆಯ ಮೆಟ್ರೋ ರೈಲು ಕಾರ್ಯಕ್ರಮ ಬೆಂಗಳೂರಿಗೆ ಸಂಬಂಧಿಸಿದ್ದು ಮತ್ತು ತಾನು ಬೆಂಗಳೂರು ಸಚಿವನಾಗಿದ್ದರೂ ತನಗೆ ಮಾತಾಡುವ ಅವಕಾಶ ಸಿಗಲಿಲ್ಲ, ಆದರೆ ಬೆಂಗಳೂರು ನಗರದ ಪ್ರಾಮುಖ್ಯತೆ ಮತ್ತು ಅದಕ್ಕೆ ಏನು ಬೇಕಾಗಿದೆ ಅನ್ನೋದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಹೇಳಿದ್ದೇನೆ ಎಂದರು.
ಬೆಂಗಳೂರು ಒಂದು ಗ್ಲೋಬಲ್ ಸಿಟಿ ಮತ್ತು ನಗರದ ಮೂಲಕ ಜಗತ್ತನ್ನು ನೋಡಬೇಕೆಂಬ ಸಂಗತಿಯನ್ನು ಪ್ರಧಾನಿ ಮೋದಿ ಮನವರಿಕೆ ಮಾಡಿಕೊಂಡಿದ್ದಾರೆ, ನಗರಕ್ಕೆ ಮಹತ್ವದ ಸ್ಥಾನಮಾನ ಸಿಗಲು ಎಲ್ಲ ಸರ್ಕಾರಗಳು ಕಾರಣವಾಗಿವೆ, ಕೇವಲ ತಾನು ಮತ್ತು ತಮ್ಮ ಸರ್ಕಾರ ಅಂತಲ್ಲ, ನಗರದ ಮತ್ತಷ್ಟು ಅಭಿವೃದ್ಧಿಗೆ ಇನ್ನೂ ಹಣ ಬೇಕು, ಸಂಸತ್ತಿನಲ್ಲಿ ರಾಜ್ಯದ ಪ್ರತಿನಿಧಿಗಳು ಪ್ರಧಾನಿಯವರೊಂದಿಎಗ ಚರ್ಚೆ ನಡೆಸಿ ಅನುದಾನ ತರುವ ಪ್ರಯತ್ನ ಮಾಡಬೇಕು ಎಂದು ಶಿವಕುಮಾರ್ ಹೇಳಿದರು.
For More Updates Join our WhatsApp Group :