ರಶ್ಮಿಕಾ ಮಂದಣ್ಣ ನಟನೆಯ ಹೊಸ ಹಿಂದಿ ಸಿನಿಮಾ ‘ಥಮ’. ಇದೊಂದು ಹಾರರ್ ಸಿನಿಮಾ ಆಗಿದ್ದು ರಶ್ಮಿಕಾ ಲುಕ್ನ ಮೊದಲ ಪೋಸ್ಟರ್ ಇದೀಗ ಬಿಡುಗಡೆ ಆಗಿದೆ. ‘ಥಮ’ ಸಿನಿಮಾ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ಆಯುಷ್ಮಾನ್ ಖುರಾನಾ ನಾಯಕ. ನವಾಜುದ್ಧೀನ್ ಸಿದ್ಧಿಖಿ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ.
ಹಲವು ಹಾರರ್ ಸಿನಿಮಾಗಳನ್ನು ನೀಡಿದ ಖ್ಯಾತಿ ಮ್ಯಾಡಾಕ್ ಫಿಲ್ಮ್ಸ್ಗೆ ಇದೆ. ಈ ನಿರ್ಮಾಣ ಸಂಸ್ಥೆಯು ‘ಥಮ’ ಸಿನಿಮಾನ ನಿರ್ಮಾಣ ಮಾಡಿದೆ. ಆಯುಷ್ಮಾನ್-ರಶ್ಮಿಕಾ ಜೊತೆಗೆ ನವಾಜುದ್ದೀನ್ ಸಿದ್ದಿಖಿ, ಪರೇಶ್ ರಾವಲ್ ಮೊದಲಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಅವರ ಪಾತ್ರ ಹೈಲೈಟ್ ಆಗಿದೆ. ಆಯುಷ್ಮಾನ್ ಖುರಾನಾ ಅವರು ಅಲೋಕ್ ಆಗಿ ಕಾಣಿಸಿಕೊಂಡಿದ್ದಾರೆ. ‘ಮಾನವೀಯತೆಯ ಕೊನೆಯ ಭರವಸೆ’ ಎಂದು ಇವರ ಪೋಸ್ಟರ್ ಮೇಲೆ ಬರೆಯಲಾಗಿದೆ. ರಶ್ಮಿಕಾ ಮಂದಣ್ಣ ಅವರು ತಡಾಕಾ ಹೆಸರಿನ ಪಾತ್ರ ಮಾಡುತ್ತಿದ್ದಾರೆ.
ನವಾಜುದ್ದೀನಿ ಸಿದ್ದಿಕಿ ಪೋಸ್ಟರ್ ಗಮನ ಸೆಳೆದಿದೆ. ಅವರು ಯಕ್ಷಾಸನ್ ಹೆಸರಿ ಪಾತ್ರ ಮಾಡುತ್ತಿದ್ದಾರೆ. ಪರೇಶ್ ರಾವಲ್ ಅವರು ಆರ್ಡಿನರಿ ಲುಕ್ನಲ್ಲಿ ಇದ್ದಾರೆ. ಈ ಚಿತ್ರದಲ್ಲಿ ಹಾರರ್, ಕಾಮಿಡಿ ಹಾಗೂ ರೊಮ್ಯಾನ್ಸ್ ಇದೆ. ಈ ಚಿತ್ರವನ್ನು ಆದಿತ್ಯ ಸರ್ಪೋತ್ದಾರ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ದೀಪಾವಳಿಯಲ್ಲಿ ತೆರೆಗೆ ಬರಲಿದೆ. ಪ್ರತಿ ಬಾರಿ ದೀಪಾವಳಿಗೆ ಹಾರರ್ ಸಿನಿಮಾಗಳು ಬಿಡುಗಡೆ ಕಾಣುತ್ತವೆ. ಈ ಬಾರೀಯೂ ಅದೇ ರೀತಿಯ ಸಿನಿಮಾ ಒಂದು ತೆರೆಗೆ ಬರುತ್ತಿದೆ.
ರಶ್ಮಿಕಾ ಮಂದಣ್ಣ ಅವರು ಮುಟ್ಟಿದ್ದೆಲ್ಲ ಚಿನ್ನ. ಈ ಮೊದಲು ರಿಲೀಸ್ ಆದ ‘ಪುಷ್ಪ 2’, ‘ಛಾವ’, ‘ಅನಿಮಲ್’ ಮೊದಲಾದ ಸಿನಿಮಾಗಳು ಭರ್ಜರಿ ಯಶಸ್ಸು ಕಂಡವು. ಈಗ ಅವರ ಹೊಸ ಸಿನಿಮಾ ಬಗ್ಗೆ ನಿರಿಕ್ಷೆ ಇದೆ. ಹಾಹರ್ ಕಾಮಿಡಿ ಸಿನಿಮಾಗಳನ್ನು ಜನರು ಹೆಚ್ಚು ಇಷ್ಟಪಡುತ್ತಿದ್ದಾರೆ. ಹೀಗಾಗಿ, ‘ಥಮ’ ಸಿನಿಮಾ ಯಶಸ್ಸು ಕಂಡರೂ ಅಚ್ಚರಿ ಏನಿಲ್ಲ. ಇದರಿಂದ ರಶ್ಮಿಕಾಗೆ ಮತ್ತೊಂದು ಗೆಲುವು ಸಿಗಲಿದೆ
For More Updates Join our WhatsApp Group :