ಬೆಂಗಳೂರು: ಮಾಧ್ಯಮಗಳೊಂದಿಗೆ ಮಾತಾಡಿರುವ ಸುಜಾತಾ ಭಟ್ ಅವರು ಅನನ್ಯ ಭಟ್ ತನ್ನ ಮಗಳು, ಅದನ್ನು ಪ್ರೂವ್ ಮಾಡಲು ಮಾಧ್ಯಮದವರಿಗೆ ಯಾವ ದಾಖಲೆಯನ್ನೂ ಕೊಡಲಾರೆ, ದಾಖಲಾತಿಗಳನ್ನು ಸುಟ್ಟುಹಾಕಿದ್ದಾರೆ, ಅಕೆಯೊಂದಿಗಿದ್ದ ತನ್ನ ಫೋಟೊಗಳನ್ನು ಸಹ ಸುಡಲಾಗಿದೆ ಎಂದು ಹೇಳುತ್ತಾರೆ.
ಅನನ್ಯ ಭಟ್ ತನ್ನ ಮಗಳೇ ಎಂದು ಅವರು ಧರ್ಮಸ್ಥಳದ ಮಂಜುನಾಥ ಮತ್ತು ಅಣ್ಣಪ್ಪ ಸ್ವಾಮಿ ಮೇಲೆ ಆಣೆ ಮಾಡಿ ಹೇಳುತ್ತಾರೆ. ಮಹೇಶ್ ತಿಮರೋಡಿ ಮನೆಯಲ್ಲಿ ತಾನು 4 ದಿನ ಇದ್ದಿದ್ದು ನಿಜ, ಅವರು ತನ್ನ ಬ್ರೇನ್ ವಾಶ್ ಮಾಡಿಲ್ಲ, ಊಟ ಹಾಕಿದ್ದಾರೆ ಅಷ್ಟೇ ಎಂದು ಅವರು ಹೇಳುತ್ತಾರೆ. ತಿಮ್ಮರೋಡಿ ಮನೆಯಿಂದ ಹೊರಬಂದ ಬಳಿಕ ತನ್ನ ಸ್ನೇಹಿತರ ಮನೆಯಲ್ಲಿದ್ದೆ, ಅವರ ಹೆಸರುಗಳನ್ನು ಬಹಿರಂಗ ಪಡಿಸಲ್ಲ, ಎಂದು ಹೇಳುವ ಅವರು ತಾನು ಯಾರ ಸಂಸಾರದಲ್ಲೂ ಹುಳಿ ಹಿಂಡುವ ಕೆಲಸ ಮಾಡಿಲ್ಲ ಎನ್ನುತ್ತಾರೆ.
For More Updates Join our WhatsApp Group :