ಮಂಡ್ಯ: ಧರ್ಮಸ್ಥಳದಲ್ಲಿ ಶವಗಳ ಶೋಧ ನಡೆಸಿದ ಎಸ್ಐಟಿ ಇದೀಗ ದೂರುದಾರನ ಹಿನ್ನೆಲೆ ಶೋಧಿಸುತ್ತಿದೆ. ಮಾಸ್ಕ್ಮ್ಯಾನ್ ಬಗ್ಗೆ ತನಿಖೆ ತೀವ್ರಗೊಳಿಸಿದೆ. ಮಾಸ್ಕ್ಮ್ಯಾನ್ ಜೊತೆ ಕೆಲಸ ಮಾಡಿದ್ದ ವ್ಯಕ್ತಿ ವಿಚಾರಣೆ ವೇಳೆ ನೂರಾರು ಶವಗಳನ್ನು ಹೂತಿರುವುದು ಸುಳ್ಳು ಎಂದು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದರು. ಅಷ್ಟೇ ಅಲ್ಲದೆ ಶಾಸಕ ಜನಾರ್ದನ ರೆಡ್ಡಿ ಮಾಸ್ಕ್ಮ್ಯಾನ್ ತಮಿಳುನಾಡಿನವನು ಎಂದಿದ್ದರು. ಹೀಗಿರುವಾಗ ಇದೀಗ ಆ ಮಾಸ್ಕ್ಮ್ಯಾನ್ ಮಂಡ್ಯ ಮೂಲದ ವ್ಯಕ್ತಿ ಎನ್ನಲಾಗುತ್ತಿದೆ.
ಭೀಮ ಅಂತೆಲ್ಲ ಹೇಳುವುದು ಸುಳ್ಳು ಎಂದು ಗ್ರಾಮಸ್ಥರು
ಈ ವಿಚಾರವಾಗಿ ಗ್ರಾಮಸ್ಥರಾದ ನಿಂಗರಾಜು ಮತ್ತು ಶಂಕರೇಗೌಡ ಮಾಹಿತಿ ನೀಡಿದ್ದಾರೆ. ದೂರುದಾರ ಮಂಡ್ಯ ಮೂಲದವನು. ಹುಟ್ಟಿ ಬೆಳೆದಿದ್ದು ನಮ್ಮ ಗ್ರಾಮದಲ್ಲೇ. ಮಾಸ್ಕ್ಮ್ಯಾನ್ ಧರ್ಮಾಧಿಕಾರಿ ಬಗ್ಗೆ ಹೇಳುತ್ತಿರುವುದು ಸುಳ್ಳು ಎಂದು ಗ್ರಾಮಸ್ಥರು ಹೇಳಿದ್ದಾರೆ.
25 ವರ್ಷಗಳ ಹಿಂದೆ ನಮ್ಮೂರಿನಿಂದ ಧರ್ಮಸ್ಥಳಕ್ಕೆ ಹೋಗಿದ್ದ. ನಾವು ಧರ್ಮಸ್ಥಳಕ್ಕೆ ಹೋಗಿದ್ದಾಗ ಆತ ನಮ್ಮನ್ನು ಭೇಟಿ ಮಾಡುತ್ತಿದ್ದ. ದೇವಸ್ಥಾನಕ್ಕೂ ನಮ್ಮನ್ನು ಬಿಡಿಸುತ್ತಿದ್ದ. ಈತನಿಗೆ ಗ್ರಾಮದಲ್ಲಿ ಜಾಗ ಇತ್ತು, ಅದನ್ನು ಮಾರಿಕೊಂಡಿದ್ದಾನೆ ಎಂದರು.
ಕಳೆದ ಐದಾರು ವರ್ಷಗಳ ಹಿಂದೆ ಮತ್ತೆ ಬಂದು ಇದೇ ಗ್ರಾಮದಲ್ಲಿ ಇದ್ದು ಹೋಗಿದ್ದ. ಆಗ ಹಸುಗಳನ್ನ ತೆಗೆದುಕೊಳ್ಳಲು ಬ್ಯಾಂಕ್ ಲೋನ್ ಕೊಡಿಸಿದ್ದೆ. ಅದನ್ನು ಕಟ್ಟಿರಲಿಲ್ಲ. ನಮ್ಮ ಇಟ್ಟಿಗೆ ಪ್ಯಾಕ್ಟರಿಯಲು ಕೆಲಸ ಮಾಡಿಕೊಂಡಿದ್ದ. ಬಳಿಕ ದುಡ್ಡಿ ತೆಗೆದುಕೊಂಡು ಏಕಾಏಕಿ ಖಾಲಿ ಮಾಡಿಕೊಂಡು ಹೋಗಿದ್ದ. ಈತನ ಸಹೋದರ ಈಗಲು ಧರ್ಮಸ್ಥಳದಲ್ಲಿ ಇದ್ದಾನೆ ಎಂದು ಹೇಳಿದ್ದಾರೆ.
ದೂರುದಾರನ ಕ್ಯಾರೆಕ್ಟರ್ ಸರಿ ಇಲ್ಲ, ಆತ 3 ಮದುವೆಯಾಗಿದ್ದ. ಆತ ಹುಟ್ಟು ಸೋಮಾರಿ, ಇಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ಅವರ ತಂದೆ-ತಾಯಿ ಮತ್ತು ಮೂರ್ನಾಲ್ಕು ಜನ ಅಣ್ಣ-ತಮ್ಮಂದಿರಿದ್ದು, ಅವರೆಲ್ಲಾ ಒಳ್ಳೆಯವರು. ಆದರೆ ಇವನು ಮಾತ್ರ ಫ್ರಾಡ್. ಒಂದೂವರೆ ವರ್ಷದ ಹಿಂದೆ ಆತ ನನಗೆ ಫೋನ್ ಮಾಡಿದ್ದ ಎಂದು ಗ್ರಾಮಸ್ಥರಾದ ನಿಂಗರಾಜು ಮತ್ತು ಶಂಕರೇಗೌಡ ಮಾಹಿತಿ ನೀಡಿದ್ದಾರೆ.
For More Updates Join our WhatsApp Group :