ಬೆಂಗಳೂರಿನಲ್ಲಿ ಒಂದಲ್ಲಾ ಒಂದು ನಿರ್ಲಕ್ಷ್ಯದಿಂದಾಗಿ BMTC ಎಲೆಕ್ಟ್ರಿಕ್ Bus ಗಳಿಗೆ ಅಮಾಯಕರು ಬಲಿ. | Death

ಬೆಂಗಳೂರಿನಲ್ಲಿ ಒಂದಲ್ಲಾ ಒಂದು ನಿರ್ಲಕ್ಷ್ಯದಿಂದಾಗಿ BMTC ಎಲೆಕ್ಟ್ರಿಕ್ Bus ಗಳಿಗೆ ಅಮಾಯಕರು ಬಲಿ. | Death

ಬೆಂಗಳೂರು : ಸಿಲಿಕಾನ್ ಸಿಟಿಯ ಜನರು ಸಂಚಾರಕ್ಕಾಗಿ ಹೆಚ್ಚಾಗಿ ಬಿಎಂಟಿಸಿ ಬಸ್ಗಳನ್ನು  ಅವಲಂಬಿಸಿದ್ದಾರೆ. ಆದರೆ ಇದೇ ಬಸ್ಗಳಿಗೆ ಬಲಿಯಾಗುವವರ ಸಂಖ್ಯೆ ಮಾತ್ರ ನಿಲ್ಲುತ್ತಿಲ್ಲ. ಒಂದಲ್ಲ ಒಂದು ನಿರ್ಲಕ್ಷ್ಯದಿಂದಾಗಿ ಅಮಾಯಕರ ಸಾವಿಗೆ ಕಾರಣವಾಗುತ್ತಿದೆ. ಕಳೆದ ಒಂದು ವಾರದಲ್ಲಿ ನಾಲ್ಕು ಜನರು ಬಿಎಂಟಿಸ್ ಬಸ್ನಿಂದ ಮೃತಪಟ್ಟಿದ್ದಾರೆ. ಎಲೆಕ್ಟ್ರಿಕ್ ಬಸ್ಗಳಿಂದಲೇ ಅತಿ ಹೆಚ್ಚು ಅಪಘಾತಗಳು ಸಂಭವಿಸಿದ್ದು, 15 ತಿಂಗಳಲ್ಲಿ 18 ಜನರು ಬಲಿಯಾಗಿದ್ದಾರೆ.

ಬಿಎಂಟಿಸಿ ಬಸ್ಗಳಿಗೆ ಸಾರ್ವಜನಿಕರು ಸೇರಿದಂತೆ ಬೈಕ್ ಸವಾರರು ಬಲಿಯಾಗುತ್ತಿದ್ದಾರೆ. ಮೊನ್ನೆ ಜಯನಗರದಲ್ಲಿ ಎಲೆಕ್ಟ್ರಿಕ್ ಬಸ್ನಿಂದ ಬಿದ್ದು ವೃದ್ಧ ಸಾವನ್ನಪ್ಪಿದ್ದರು. ಜುಲೈ 30ರಂದು ಮಡಿವಾಳದಲ್ಲಿ ಎಲೆಕ್ಟ್ರಿಕ್ ಬಸ್ಗೆ ಸಿಲುಕಿ ವೃದ್ದೆ ಸಾವನ್ನಪ್ಪಿದ್ದರು. ಹೀಗೆ 15 ತಿಂಗಳಲ್ಲಿ ಒಟ್ಟು 18 ಮಂದಿ ಮೃತಪಟ್ಟಿದ್ದಾರೆ.

ಇನ್ನು ಎಲೆಕ್ಟ್ರಿಕ್ ಬಸ್ಗಳ ಡ್ರೈವರ್ಗಳು ಖಾಸಗಿ ಚಾಲಕರಾಗಿದ್ದಾರೆ. ಈ ಚಾಲಕರ ಮೇಲೆ ಅತಿವೇಗ, ನಿರ್ಲಕ್ಷ್ಯದಿಂದ ಬಸ್ ಚಲಾವಣೆ ಆರೋಪಗಳಿವೆ. ಬಿಎಂಟಿಸಿ ಬಸ್ ಚಾಲಕರಿಗೆ ಚಾಲನೆ ವೇಳೆ ಪಾಲಿಸಬೇಕಾದ ಕ್ರಮಗಳ ಬಗ್ಗೆ ಈಗಾಗಲೇ ಸಂಚಾರಿ ಪೊಲೀಸರಿಂದ ನಿರಂತರ ತರಬೇತಿ ನೀಡಲಾಗಿದೆ. ಆದರೂ ಪ್ರಾಣಹಾನಿ ಸಂಭವಿಸುತ್ತಿವೆ.

ಶಾಲೆಗೆ ಹೋಗುತ್ತಿದ್ದ ಬಾಲಕಿ ಬಿಎಂಟಿಸಿ ಬಸ್ಗೆ ಬಲಿ

ಶಾಲೆಗೆ ಹೋಗುವಾಗ ನಡೆದ ಅಪಘಾತದಲ್ಲಿ 10 ವರ್ಷದ ಬಾಲಕಿಯ ಸಾವಾಗಿದೆ. ಬಿಎಂಟಿಸಿ ಬಸ್ಗೆ ಸಿಲುಕಿ ಸ್ಥಳದಲ್ಲಿ ಬಾಲಕಿ ಜೀವ ಬಿಟ್ಟಿದ್ದಾಳೆ. ಕೋಗಿಲು ಕ್ರಾಸ್ನಿಂದ ಮಾರುತಿನಗರಕ್ಕೆ ಹೋಗುವ ರಸ್ತೆಯಲ್ಲಿ ನಿನ್ನೆ ಅಪಘಾತ ಸಂಭವಿಸಿತ್ತು. ಈ ದುರಂತದ ದೃಶ್ಯ ಡ್ಯಾಶ್ ಕ್ಯಾಮೆರಾ, ಸಿಸಿಟಿವಿಗಳಲ್ಲಿ ಸೆರೆಯಾಗಿದ್ದು, ಅಮ್ಮನ ಆಕ್ರಂದನ ಮುಗಿಲು ಮುಟ್ಟಿತ್ತು.

ಬೆಳಗ್ಗೆ ಸುಮಾರು 8 ಗಂಟೆ ಮಾರುತಿ ನಗರ ನಿವಾಸಿ ಹರ್ಷಿತಾ ತನ್ನ ಇಬ್ಬರು ಮಕ್ಕಳನ್ನ ಶಾಲೆಗೆ ಬಿಡಲು ಸ್ಕೂಟಿಯಲ್ಲಿ ಹೋಗುತ್ತಿದ್ದರು. ಆದರೆ ಮಾರುತಿನಗರದ ಮುಖ್ಯರಸ್ತೆಯಲ್ಲಿ ಹಿಂದಿನಿಂದ ಬಂದ ಬಿಎಂಟಿಸಿ ಬಸ್ ಮತ್ತು ಬೈಕ್ಗೆ ಟಚ್ ಆಗಿದೆ. ಇದರಿಂದ ನಿಯಂತ್ರಣ ಕಳೆದುಕೊಂಡ ಹರ್ಷಿತಾ ಬೈಕ್ ಸಮೇತ ಕೆಳಗೆ ಬಿದ್ದಿದ್ದಾರೆ. ಇದರಿಂದ ಬಸ್ನ ಹಿಂಬದಿ ಕೆಳಗೆ ಬಿದ್ದ 10 ವರ್ಷದ ತನ್ವಿ ಕೃಷ್ಣ ಮೇಲೆ ಹರಿದು ಆಕೆ ಸ್ಥಳದಲ್ಲೇ ಅಸುನೀಗೀದ್ದಾಳೆ. ಹಾಗೆ ಬೈಕ್ನಲ್ಲಿದ್ದ ತನ್ವಿ ತಾಯಿ, ಸಹೋದರಿಗೆ ಸಣ್ಣಪುಟ್ಟ ಗಾಯಾಗಳಾಗಿವೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *