ಕೊಪ್ಪಳ: ದಸರಾ ಮಹೋತ್ಸವ ಉದ್ಘಾಟಕರಾಗಿ ಬುಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಲಾಗಿದೆ. ಆದರೆ ಇದಕ್ಕೆ ಕೆಲ ಹಿಂದೂ ಸಂಘಟನೆ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ತೊಗಲು ಗೊಂಬೆಯಾಟದಿಂದ ಪ್ರಸಿದ್ದಿ ಪಡೆದಿರುವ ಪದ್ಮಶ್ರೀ ಭೀಮವ್ವ ಅವರಿಂದ ದಸರಾ ಉದ್ಘಾಟನೆ ಮಾಡಿಸಿ ಎಂದು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಮಾಡಲಾಗಿದೆ.
ಕೊಪ್ಪಳ ತಾಲೂಕಿನ ಮೊರನಾಳ ಗ್ರಾಮದ ಭೀಮವ್ವ ಅವರು 12 ದೇಶಗಳಲ್ಲಿ ರಾಮಾಯಣ, ಮಾಹಾಭಾರತವನ್ನು ಗೊಂಬೆಯಾಟದ ಮೂಲಕ ಪ್ರದರ್ಶಿಸಿದ್ದಾರೆ. ಹೀಗಾಗಿ ಇವರಿಂದ ದಸರಾ ಉದ್ಘಾಟಿಸುವಂತೆ ಸೋಶಿಯಲ್ ಮೀಡಿಯಾದಿಂದ ವಿಡಿಯೋ ವೈರಲ್ ಆಗಿದೆ.
For More Updates Join our WhatsApp Group :