ತುಮಕೂರು: ಸಿರಾ ತಾಲೂಕು ಹುಲಿಕುಂಟೆ ಹೋಬಳಿ ಬಡಮಾರನಹಳ್ಳಿಯಲ್ಲಿ ಒಂದು ವಾರದಿಂದ ಪ್ರತಿದಿನ ಚಿರತೆ ಜನಗಳ ಕಣ್ಣಿಗೆ ಬೀಳುತ್ತಿರುವುದಿಂದ ಜನಗಳಿಗೆ ಆತಂಕವಾಗಿದೆ. ಅದರಲ್ಲೂ ಈ ಕುರಿಗಾಹಿಗಳಿಗೆ ಭಯದ ವಾತಾವರಣದಲ್ಲಿ ಸಿಲುಕಿದ್ದಾರೆ.
ಬಡಮಾರನಹಳ್ಳಿ ನಿವಾಸಿ ನಾಗಭೂಷಣ್ ಹಾಗು ಬೊಮ್ಮಜ್ಜ ಅನ್ನುವರು ಮೇಕೆಗಳನ್ನೂ ಮೇಯಿಸುವುದಕ್ಕೆ ಹೊಲದಲ್ಲಿ ಹೋದಂತಹ ಸಂದರ್ಭದಲ್ಲಿ ಮೇಕೆಗಳಿಗೆ ಮೇವು ತರುವುದಕ್ಕೆ ಮರ ಹತ್ತಿ ಸೊಪ್ಪು ಕಡಿಯುವ ಸಂದರ್ಭದಲ್ಲಿ ಚಿರತೆ ಬಂದು ಒಂದು ಮೇಕೆಯನ್ನು ದಾಳಿ ಮಾಡಿ ಕತ್ತನ್ನು ಕಡಿದು ಸಾಯಿಸಿ ಪರಾರಿ ಆಗಿದೆ.
ಮೇಕೆಯ ಬೆಲೆ ಕನಿಷ್ಠ 10-15 ಸಾವಿರ ಇತ್ತು, ಇಗಾ ರೈತರ ಕಷ್ಟವನ್ನು ಕೇಳೋರ್ಯಾರು ಅಧಿಕಾರಿಗಳು ಬೋನ್ ಆಕಿದರು ಏನು ಪ್ರಯೋಜನಕ್ಕೆ ಬರುತ್ತಿಲ್ಲ ಇದರ ಬಗ್ಗೆ ಆದಷ್ಟು ಬೇಗ ಅಧಿಕಾರಿಗಳು ಗಮನವಹಿಸಿ ಚಿರತೆಯನ್ನು ಹಿಡಿಯುವುದರಲ್ಲಿ ಮುಂದಾಗಬೇಕು ಎಂದು ಸ್ಥಳೀಯರ ವತ್ತಾಯವಾಗಿದೆ.
For More Updates Join our WhatsApp Group :