ಬೆಂಗಳೂರು: ಆರೆಸ್ಸೆಸ್ ಪ್ರಾರ್ಥನಾ ಗೀತೆಯನ್ನು ಸದನದಲ್ಲಿ ಹಾಡಿದ್ದಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಕ್ಷಮೆ ಕೇಳಿದ ನಂತರ ಮಾಧ್ಯಮದವರೊಂದಿಗೆ ಮಾತಾಡಿರುವ ಕಾಂಗ್ರೆಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ್, ತಾನು 50ವರ್ಷಗಳಿಂದ ಸೈದ್ಧಾಂತಿಕವಾಗಿ ಪಕ್ಷದಲ್ಲಿದ್ದೇನೆ, ಹಿರಿಯ ನಾಯಕನಾಗಿ, ವಿಧಾನ ಪರಿಷತ್ ಸದಸ್ಯನಾಗಿ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯನಾಗಿ ತಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ಎಂದರು.
ಕಾಂಗ್ರೆಸ್ ಪಕ್ಷವನ್ನು ನಾನಾಗಲೀ ಶಿವಕುಮಾರ್ ಆಗಲೀ ಕಟ್ಟಿದ್ದಲ್ಲ; ಪಕ್ಷವನ್ನು ಪೋಷಿಸಿ ಬೆಳೆಸಿದ ಮಹಾತ್ಮಾ ಗಾಂಧಿ, ಕಾಂಗ್ರೆಸ್ ಮತ್ತು ತಿರಂಗವನ್ನು ದ್ವೇಷಿಸುವ ಆರೆಸ್ಸೆಸ್ ಮತ್ತು ನಾಥೂರಾಮ್ ಗೋಡ್ಸೆಯ ಪ್ರಾರ್ಥನಾ ಗೀತೆ ನಮಗೆ ಬೇಕಿಲ್ಲ, ಶಿವಕುಮಾರ್ ಒಬ್ಬ ಮುಖ್ಯಮಂತ್ರಿಯಾಗಿ ಅದನ್ನು ಹೇಳಿಕೊಳ್ಳಲಿ, ಅಭ್ಯಂತರವೇನೂ ಇಲ್ಲ, ಆದರೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಅವರು ಅದನ್ನು ಹೇಳಲೇಬಾರದು ಎಂದು ಹರಿಪ್ರಸಾದ್ ಹೇಳಿದರು.
For More Updates Join our WhatsApp Group :