ಮೈಸೂರು: ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ತಮ್ಮ ಪಕ್ಷದರನ್ನು ತರಾಟೆಗೆ ತೆಗೆದುಕೊಳ್ಳೋದು ಹೊಸದೇನಲ್ಲ. ಬಾನು ಮುಷ್ತಾಕ್ ಅವರು ಈ ಬಾರಿಯ ದಸರಾ ಉತ್ಸವ ಉದ್ಘಾಟಿಸುತ್ತಿರುವುದರ ವಿರುದ್ಧ ತೀವ್ರ ಸ್ವರೂಪದ ಆಕ್ಷೇಪಣೆ ಎತ್ತಿರುವ ಪ್ರತಾಪ್ ಸಿಂಹ ವಿರುದ್ಧ ವಿಶ್ವನಾಥ್ ಕಿಡಿಕಾರಿದರು. ಪ್ರತಾಪ್ಗೆ ಚರಿತ್ರೆಯೇ ಗೊತ್ತಿಲ್ಲ, ಇತಿಹಾಸವನ್ನು ಓದುವುದೊಳಿತು, ಮೈಸೂರು ಸಂಸ್ಥಾನದ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ರನ್ನು ಮಹಾರಾಜರು ಅಂಬಾರಿ ಮೇಲೆ ಪಕ್ಕದಲ್ಲಿ ಕೂರಿಸಿಕೊಳ್ಳುತ್ತಿದ್ದರು ಎಂದು ವಿಶ್ವನಾಥ್ ಹೇಳಿದರು.
ಬಿಜೆಪಿ ಒಂದೇ ಅಂತಲ್ಲ, ಎಲ್ಲ ಪಕ್ಷಗಳು ಈ ವಿಷಯದ ಬಗ್ಗೆ ತಮಗೆ ತೋಚಿದನ್ನು ಹೇಳುತ್ತಿವೆ ಮತ್ತು ಬಾನು ಮುಷ್ತಾಕ್ಗೆ ಸಿಕ್ಕಿರುವ ಬೂಕರ್ ಪ್ರಶಸ್ತಿಗೆ ಅಪಮಾನ ಮಾಡುತ್ತಿವೆ. ಎರಡು ವರ್ಷಗಳ ಹಿಂದೆ ಅವರು ಕನ್ನಡಾಂಬೆಗೆ ಅವಮಾನ ಮಾಡಿದ್ದು ನಿಜ, ಅವರು ಪತ್ರಬರೆದು ಸ್ಪಷ್ಟನೆ ನೀಡಿದ್ದರೆ ಅದು ಒಳ್ಳೆಯದು, ಆದರೆ ಅದನ್ನು ಮಾತ್ರ ಮುಂದೆ ಮಾಡಿದರೆ ಹೇಗೆ? ಅವರಿಂದ ಕನ್ನಡಭಾಷೆಗೆ ಸಿಕ್ಕಿರುವ ಸನ್ಮಾನವನ್ನು ಯಾಕೆ ಕಡೆಗಣಿಸಲಾಗುತ್ತಿದೆ ಎಂದು ವಿಶ್ವನಾಥ್ ಹೇಳಿದರು.
For More Updates Join our WhatsApp Group :
