ಚಾಮರಾಜನಗರ: ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿರುವ ಹುಲಿಯ ಹುಡುಕಾಟಕ್ಕೆ ಅರಣ್ಯಾಧಿಕಾರಿಗಳ ತಂಡ ಬಿರುಸಿನಿಂದ ಮುಂದಾಗಿದ್ದರೂ, ಮೂರು ದಿನ ಕಳೆದರೂ ಒಂದೇ ಒಂದು ಸುಳಿವು ಸಿಕ್ಕಿಲ್ಲ. ಈ ನಡುವೆ ಹುಲಿ ಅಧಿಕಾರಿಗಳೊಂದಿಗೆ ಕಣ್ಣಾಮುಚ್ಚಾಲೆ ಆಟವಾಡುತ್ತಿರುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಗುಂಡ್ಲುಪೇಟೆ ತಾಲೂಕಿನ ಮದ್ದಯ್ಯನ ಹುಂಡಿ ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ ಈ ಹುಲಿ ಆಗಾಗ ಕಾಣಿಸಿಕೊಂಡು, ಕಾಡಂದಿಗಳನ್ನು ಬೇಟೆಯಾಡಿ, ಗ್ರಾಮಸ್ಥರ ನಿದ್ದೆಗೆಡಿಸುತ್ತಿತ್ತು. ಇದರಿಂದ ಗ್ರಾಮಸ್ಥರ ಭಯ ದಿನದಿಂದ ದಿನಕ್ಕೆ ಹೆಚ್ಚುತ್ತಿತ್ತು.ಸ್ಥಳೀಯರ ದೂರು ಹಿನ್ನೆಲೆಯಲ್ಲಿ ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್ ಸಿಬ್ಬಂದಿ ಹುಲಿಯ ಸೆರೆಗೆ ವಿಶೇಷ ಕೂಂಬಿಂಗ್ ನಡೆಸುತ್ತಿದ್ದಾರೆ. ಆದರೆ 62 ಮಂದಿ ಅರಣ್ಯ ಸಿಬ್ಬಂದಿ ತೊಡಗಿದ್ದರೂ, ಹುಲಿಯ ನಿಜವಾದ ಅಡಗುತಾಣ ಪತ್ತೆಯಾಗಿಲ್ಲ.ಗ್ರಾಮಸ್ಥರ ಆತಂಕ ತಗ್ಗಿಸಲು ಅರಣ್ಯಾಧಿಕಾರಿಗಳು ಶ್ರಮಿಸುತ್ತಿದ್ದು, ಮುಂದಿನ ದಿನಗಳಲ್ಲಿ ಹುಲಿ ಪತ್ತೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ.
For More Updates Join our WhatsApp Group :