ಶುಕ್ರವಾರದಿಂದ ಸಿನಿಪ್ರಿಯರಿಗೆ ಸಿಹಿ ಸುದ್ದಿ: 200 ರೂ. ಟಿಕೆಟ್ ದರ ಜಾರಿ!

ಶುಕ್ರವಾರದಿಂದ ಸಿನಿಪ್ರಿಯರಿಗೆ ಸಿಹಿ ಸುದ್ದಿ: 200 ರೂ. ಟಿಕೆಟ್ ದರ ಜಾರಿ!

ಬೆಂಗಳೂರು: ದುಬಾರಿ ಟಿಕೆಟ್ ದರಕ್ಕೆ ಕಡಿವಾಣ ಬೀಳಲಿದೆ. ಸೆಪ್ಟೆಂಬರ್ 12ರಿಂದ ಸರ್ಕಾರದ ಹೊಸ ಆದೇಶ ಜಾರಿಗೆ ಬರುವುದರಿಂದ ಏಕಪರದೆ ಮತ್ತು ಮಲ್ಟಿಪ್ಲೆಕ್ಸ್ಗಳಲ್ಲಿ ಸಾಮಾನ್ಯ ಟಿಕೆಟ್ ದರ ಗರಿಷ್ಠ ₹200 (ತೆರಿಗೆ ಹೊರತುಪಡಿಸಿ) ಮಾತ್ರವಾಗಿರಲಿದೆ. ತೆರಿಗೆ ಸೇರಿ ಟಿಕೆಟ್ ದರ ₹236 ದಾಟಲಾರದು.

ಹೊಸ ನಿಯಮದ ಪ್ರಮುಖ ಅಂಶಗಳು:

* ಏಕಪರದೆ ಹಾಗೂ ಮಲ್ಟಿಪ್ಲೆಕ್ಸ್ನಲ್ಲಿ ಸಾಮಾನ್ಯ ಟಿಕೆಟ್ ಬೆಲೆ ₹200 ಮೀರಬಾರದು.

* ಗೋಲ್ಡ್ ಕ್ಲಾಸ್ ಆಸನಗಳಿಗೆ ಈ ಮಿತಿ ಅನ್ವಯವಾಗುವುದಿಲ್ಲ; ಮಲ್ಟಿಪ್ಲೆಕ್ಸ್ಗಳು ತಮ್ಮಿಷ್ಟದ ದರ ನಿಗದಿ ಮಾಡಬಹುದು.

*  ರಿಕ್ಲೈನರ್ ಸೀಟ್ಗಳಿಗೂ 200 ರೂ. ನಿಯಮ ಅನ್ವಯವಾಗಲಿದೆ.

*  ನಿಯಮದ ಆದೇಶವು ಇಂದು ಹೊರಬಿದ್ದಿದ್ದು, ಪ್ರತಿ ಟಿಕೆಟ್ ಮಂದಿರಕ್ಕೆ ತಲುಪಿದ ನಂತರ ತಕ್ಷಣ ಜಾರಿಯಾಗಲಿದೆ.

ಹಿನ್ನೆಲೆ:ಬಿಗ್ ಬಜೆಟ್ ಹಾಗೂ ಪರಭಾಷಾ ಸಿನಿಮಾಗಳಿಗೆ ಕರ್ನಾಟಕದಲ್ಲಿ ಟಿಕೆಟ್ ದರ 500-1000 ರೂ.ವರೆಗೂ ಏರಿದ್ದ ಪರಿಣಾಮ, ಸಾಮಾನ್ಯ ಪ್ರೇಕ್ಷಕರು ಸಿನಿಮಾ ಮಂದಿರಗಳಿಂದ ದೂರವಾಗಿದ್ದರು. ಇದೀಗ ಸರ್ಕಾರದ ಹೊಸ ಆದೇಶದಿಂದ ಪ್ರೇಕ್ಷಕರು ನಿಟ್ಟುಸಿರು ಬಿಟ್ಟಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *