Rajkaluve encroachers ಮೇಲೆ ಗೂಂಡಾ ಕಾಯ್ದೆ ಹಾಕಿ”

Rajkaluve encroachers ಮೇಲೆ ಗೂಂಡಾ ಕಾಯ್ದೆ ಹಾಕಿ''

ಬೆಂಗಳೂರು: ಕರ್ನಾಟಕ ಸರ್ಕಾರ ಕೈಗೊಳ್ಳುತ್ತಿರುವ ನಿರ್ಧಾರ ಮತ್ತು ನಡೆ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹರಿಹಾಯ್ದಿದ್ದಾರೆ. ರಾಜಕಾಲುವೆ ಒತ್ತುವರಿ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಮಳೆ ಹಾನಿ ಸ್ಥಳಗಳ ಭೇಟಿ ಹಾಗೂ KSDL ಗೆ ತೆಲುಗು ನಟಿ ತಮನ್ನಾ ಭಾಟಿಯಾ ಅವರನ್ನು ರಾಯಭಾರಿಯಾಗಿ ಮಾಡಿದ್ದನ್ನು ಖಂಡಿಸಿದ್ದಾರೆ.

ಶುಕ್ರವಾರ ಈ ಕುರಿತು ಪ್ರತಿಕ್ರಿಯಿಸಿರುವ ಅವರು, ರಾಜ್ಯ ಸರ್ಕಾರ ಈ ಆರಂಭ ಶೂರತ್ವವನ್ನು ಬದಿಗಿಟ್ಟು, ರಾಜಕಾಲುವೆ ಒತ್ತುವರಿ ಮಾಡಿದವರ ಮೇಲೆ ಗೂಂಡಾ ಕಾಯ್ದೆ ಹಾಕಬೇಕು. ಹಾಗೆಯೇ ರಾಜಕಾಲುವೆ ಇದೆ ಎಂದು ಗೊತ್ತಿದ್ದರೂ ಅನುಮತಿ ಕೊಟ್ಟ ಇಂಜಿನಿಯರ್ ಗಳನ್ನು ಸೇವೆಯಿಂದ ಅಮಾನತಿನಲ್ಲಿಡಿ. ಪ್ರತಿ ವರ್ಷ ಈ ಬಿಕ್ಕಟ್ಟು ಉದ್ಭವಿಸುವುದು, ಮುಖ್ಯ ಮಂತ್ರಿಗಳು, ಉಪ ಮುಖ್ಯ ಮಂತ್ರಿಗಳು, ಮುಖ್ಯ ಆಯುಕ್ತರು ಟ್ರ್ಯಾಕ್ಟರ್ ನಲ್ಲಿ ಮೆರವಣಿಗೆ ಹೊರತು ಸಾಂತ್ವಾನ ಹೇಳುವುದು ಹಾಸ್ಯಾಸ್ಪದವಾಗಿದೆ ಎಂದು ಅವರು ಜರಿದಿದ್ದಾರೆ.

ಕೆರೆ ಒತ್ತುವರಿದಾರರು ಹಾಗೂ ರಾಜಕಾಲುವೆ ಒತ್ತುವರಿ ಮಾಡುವರ ವಿರುದ್ಧ ಕ್ರಮ ಜರುಗಿಸುವುದನ್ನು ಕೇವಲ ಸಭೆ/ಸಮಿತಿ ರಚನೆಗೆ ಸೀಮಿತಗೊಳಿಸದೆ ಸರ್ಕಾರದ ಜಿ.ಸಿ.ಬಿ ಗಳು ಘರ್ಜಿಸುವಂತಾಗಬೇಕು. ಈ ಮೂಲಕ ಮಳೆಗಾಳದಲ್ಲಿ ಹಾನಿ, ತೊಂದರೆ ಅನುಭವಿಸುವ ಬೆಂಗಳೂರಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸುವಂತೆ ಆಗ್ರಹಿಸಿದರು. ನಮ್ಮ ಮೆಟ್ರೋ ಅಮಾನವೀಯ ನಡೆ ಸರಿಯಲ್ಲ ಇನ್ನೂ ನಮ್ಮ ಮೆಟ್ರೋ ಶೌಚಾಲಯ ಬಳಕೆಗೆ ಶುಲ್ಕ ನಿಗದಿ ವಿರುದ್ಧ ಮಾತನಾಡಿದ ಅವರು, ‘ನಮ್ಮ ಮೆಟ್ರೋ’ ದಲ್ಲಿರುವ ಶೌಚಾಲಯ ಉಪಯೋಗಿಸುವುದಕ್ಕೆ ದರ ನಿಗದಿ ಮಾಡಿರುವುದು ಖಂಡನೀಯ. ನಿತ್ಯ ಸಾವಿರಾರು ಪ್ರಯಾಣಿಕರು ಉಪಯೋಗಿಸುವ ಸರ್ಕಾರ ಸ್ವಾಮ್ಯದ ಸಂಸ್ಥೆ ಈ ರೀತಿ ನಿಯಮ/ನೀತಿಗಳನ್ನು ಅನುಸರಿಸುವುದು ಅಮಾನವೀಯ. ಆದಾಯ ಸೃಷ್ಟಿ ಮಾಡಬೇಕೆನ್ನುವ ಉದ್ದೇಶವಿದ್ದರೆ Non Fare Revenue Model (ಜಾಹೀರಾತು, ಡಿಜಿಟಲ್ ಡಿಸ್ಪ್ಲೇ ಇತ್ಯಾದಿಗಳಿಂದ) ಮಾಡಬೇಕು. ಅದರ ಹೊರತಾಗಿ ಜನರಿಂದ ಹಣ ಪಡೆಯುವುದು ಸರಿಯಲ್ಲ. ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಕೂಡಲೇ ಈ ನಿರ್ಧಾರವನ್ನು ವಾಪಾಸ್ ಪಡೆಯಬೇಕು ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಿದ್ದಾರೆ.

ನಟಿ ತಮನ್ನಾ ರಾಯಭಾರಿ ಆಗಿ ಬೇಡ ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ (KSDL) ಸಂಸ್ಥೆಯ ಉತ್ಪನ್ನಗಳ ಮಾರ್ಕೆಟಿಂಗ್ ಮಾಡುವುದಕ್ಕೆ 6.2 ಕೋಟಿ ವೆಚ್ಚ ಮಾಡುವುದು ಅತಾರ್ಕಿಕವಾಗಿದೆ. ಇದರ ಮೂರನೇ ಒಂದು ಭಾಗದಲ್ಲಿ ನಮ್ಮ ಕನ್ನಡ ಕಲಾವಿದರಿಗೆ ಅವಕಾಶ ನೀಡಿ ಅವರ ಸೇವೆಯನ್ನು ಪಡೆಯಬಹುದಾಗಿತ್ತು. ಸಂಸ್ಥೆಯ ಹಣವನ್ನು ಕಾರ್ಮಿಕರ ಕಲ್ಯಾಣ ನಿಧಿ ಅಥವಾ ಸಾಮಾಜಿಕ ಹೊಣೆಗಾರಿಕೆ (Corporate Societal Responsibility) ಬಳಸಬಹುದಾಗಿತ್ತು. ಕೋಟಿಗಟ್ಟಲೇ ಹಣ ಖರ್ಚು ಮಾಡಿ ನಟಿ ತಮನ್ನಾ ಭಾಟಿಯಾ ಅವರನ್ನು ರಾಯಭಾರಿ ಮಾಡಿದ ಈ ನಿರ್ಧಾರವನ್ನು ಹಿಂಪಡೆದು ಬೇರೆಯವರಿಗೆ ಅವಕಾಶ ನೀಡಿ ಸಂಸ್ಥೆಯ ಹಣವನ್ನು ಸದ್ಬಳಕೆ ಮಾಡಿಕೊಳ್ಳಲಿ ಎಂದು ಅವರು ಸಲಹೆ ನೀಡಿದ್ದಾರೆ.

Leave a Reply

Your email address will not be published. Required fields are marked *