ದೆಹಲಿ:ಅತಿವೃಷ್ಟಿಯಿಂದ ಸಂಕಷ್ಟದಲ್ಲಿರುವ ಕರ್ನಾಟಕದ ರೈತರಿಗೆ ಕೇಂದ್ರ ಸರ್ಕಾರದಿಂದ ನವರಾತ್ರಿ ವಿಶೇಷ ನೆರವು ಘೋಷಣೆಯಾಗಿದೆ. ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಅವರ ಮನವಿಗೆ ಸ್ಪಂದಿಸಿ, ಕೇಂದ್ರ ಕೃಷಿ ಸಚಿವಾಲಯ 5 ಪ್ರಮುಖ ಧಾನ್ಯಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಅನುಮತಿ ನೀಡಿದೆ.
ಯಾವ ಧಾನ್ಯಗಳಿಗೆ ಮಂಜೂರು?
2025-26ರ ಮುಂಗಾರಿ ಹಂಗಾಮಿಗೆ ಸಂಬಂಧಿಸಿದಂತೆ ಹೆಸರು ಕಾಳು, ಉದ್ದಿನ ಕಾಳು, ಕಡಲೆಬೀಜ (ನೆಲಗಡಲೆ), ಸೋಯಾಬಿನ್ ಹಾಗೂ ಸೂರ್ಯಕಾಂತಿ ಬೀಜಗಳಿಗೆ ಬೆಂಬಲ ಬೆಲೆ ಖರೀದಿಗೆ ಅನುಮತಿ ನೀಡಲಾಗಿದೆ.
ಖರೀದಿ ಪ್ರಮಾಣ (ಮೆಟ್ರಿಕ್ ಟನ್):
- ಹೆಸರು ಕಾಳು – 38,000 MT
- ಉದ್ದು – 60,810 MT
- ಸೂರ್ಯಕಾಂತಿ – 15,650 MT
- ಕಡಲೆಬೀಜ – 61,148 MT
- ಸೋಯಾಬಿನ್ – 1,15,000 MT
ಪ್ರಲ್ಹಾದ್ ಜೋಶಿಯ ಮನವಿಗೆ ಸ್ಪಂದನೆ
ಪ್ರಲ್ಹಾದ್ ಜೋಶಿ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದು, ಕರ್ನಾಟಕದ ರೈತರ ಹಿತದೃಷ್ಟಿಯಿಂದ ಈ ಧಾನ್ಯಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಒತ್ತಾಯಿಸಿದ್ದರು. ಈ ಮನವಿಗೆ ತಕ್ಷಣ ಸ್ಪಂದಿಸಿ ರೈತರಿಗೆ ನೇರವಾಗಿ ನೆರವು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಖರೀದಿ ಕೇಂದ್ರಗಳನ್ನು ಜಿಲ್ಲಾವಾರು ತೆರೆಯಿರಿ: ಜೋಶಿ ಒತ್ತಾಯ
ಪ್ರಸ್ತುತ ಮಂಜೂರಾದ ಖರೀದಿ ಟಾರ್ಗೆಟ್ ಅನುಸರಿಸಿ, ರಾಜ್ಯ ಸರ್ಕಾರ ತಕ್ಷಣ ಜಿಲ್ಲಾವಾರು ಖರೀದಿ ಕೇಂದ್ರಗಳನ್ನು ತೆರೆಯಬೇಕು ಹಾಗೂ ಬೆಂಬಲ ಬೆಲೆಯಲ್ಲಿ ಧಾನ್ಯಗಳ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಬೇಕು ಎಂದು ಪ್ರಲ್ಹಾದ್ ಜೋಶಿ ಒತ್ತಾಯಿಸಿದ್ದಾರೆ.
ಮೋದಿ, ಶಿವರಾಜ್‌ಗೆ ಧನ್ಯವಾದ
“ಕರ್ನಾಟಕದ ರೈತರ ಸಂಕಷ್ಟವನ್ನು ಅರಿತು ಕೇಂದ್ರ ಸರ್ಕಾರ ತೆಗೆದುಕೊಂಡ ತ್ವರಿತ ನಿರ್ಧಾರ, ನಿಜಕ್ಕೂ ನಮನಾರ್ಹ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೃಷಿ ಸಚಿವ ಚೌಹಾಣ್ ಅವರಿಗೆ ರೈತರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ”, ಎಂದು ಜೋಶಿ ಹೇಳಿದ್ದಾರೆ.
For More Updates Join our WhatsApp Group :
