ತುಮಕೂರು:ನವೆಂಬರ್‌ನಲ್ಲಿ ಕರ್ನಾಟಕ ಸರ್ಕಾರ ಬದಲಾಯಿಸೋ ಸಾಧ್ಯತೆ ಇದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಗೋಜಿಗೆದ್ದಿದ್ದರೆ, ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಕೆ.ಎನ್. ರಾಜಣ್ಣ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
❝ ಸರ್ಕಾರ ಬದಲಾಗಲ್ಲ, ಐದು ವರ್ಷ ಪೂರ್ತಿ ಮುಂದುವರಿಯಲಿದೆ! ❞
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೆ.ಎನ್. ರಾಜಣ್ಣ,
“ನವೆಂಬರ್‌ನಲ್ಲಿ ಬದಲಾವಣೆ ಆಗುತ್ತದೆ ಎಂಬುದು ಸುಳ್ಳು. ಯಾವ ಕ್ರಾಂತಿಯೂ ಇಲ್ಲ, ಯಾವ ಬದಲಾವಣೆಗೂ ಸಮಯವಿಲ್ಲ. ಕಾಂಗ್ರೆಸ್ ಸರ್ಕಾರ ಐದು ವರ್ಷ ಪೂರ್ಣ ಅವಧಿಗೆ ಮುಂದುವರಿಯಲಿದೆ” ಎಂದು ಸ್ಪಷ್ಟಪಡಿಸಿದರು.
“ಊಹಾಪೋಹ, ಸುಳ್ಳು ಕತೆಗಳು…”
- ಬಿಜೆಪಿ ನಾಯಕರು ಮತ್ತು ಕೆಲವರು ನವೆಂಬರ್‌ನಲ್ಲಿ ಸರ್ಕಾರದ ಅಳಿವು ಅಥವಾ ನಾಯಕರ ಬದಲಾವಣೆ ಆಗಬಹುದು ಎಂಬ ಊಹಾಪೋಹಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಟೀಕಿಸಿದ ಅವರು,
- “ಬಿಜೆಪಿ ಸುಳ್ಳು ಹೇಳುವ ದದ್ದರೆ ಮಾಡಿಕೊಂಡಿದೆ. ಸುಳ್ಳುಗಳ ಮೂಲಕವೇ ಕೇಂದ್ರ ಹಾಗೂ ರಾಜ್ಯದ ಅಧಿಕಾರಕ್ಕೇರಿದವರು” ಎಂದು ಆರೋಪಿಸಿದರು.
ಚುನಾವಣೆಗಳತ್ತ ಕಾಂಗ್ರೆಸ್ ದೃಷ್ಠಿ!
- ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಕಾರ್ಪೊರೇಷನ್ ಚುನಾವಣೆಗಳನ್ನು ಶೀಘ್ರ ನಡೆಸುವ ಉದ್ದೇಶವನ್ನು ಕಾಂಗ್ರೆಸ್ ಹೊಂದಿದೆ ಎಂದು ರಾಜಣ್ಣ ತಿಳಿಸಿದ್ದಾರೆ.
- “ಪಕ್ಷ ಸಂಘಟನಾ ಮಟ್ಟದಲ್ಲಿ ಚುರುಕುಗೊಂಡಿದ್ದು, ಮುಂದಿನ ಚುನಾವಣೆಗೆ ತಯಾರಿ ನಡೆಯುತ್ತಿದೆ” ಎಂದರು.
ಸಮ್ಮಿಶ್ರ ಸರ್ಕಾರದ ಗೊಂದಲ, ನಾಯಕರ ಅಸಮಾಧಾನ, ಬದಲಾಗುವ ಮುಖ್ಯಮಂತ್ರಿಗಳು ಎಂಬ ಎಲ್ಲಾ ಊಹೆಗಳಿಗೆ ಕೆ.ಎನ್. ರಾಜಣ್ಣ ಸ್ಪಷ್ಟನೆ ಕೊಟ್ಟಿದ್ದಾರೆ. ಇದೀಗ ನವೆಂಬರ್ನ ರಾಜಕೀಯ ಚರ್ಚೆಗೆ ಬ್ರೇಕ್ ಬಿತ್ತಿದಂತಾಗಿದೆ!
For More Updates Join our WhatsApp Group :
