ರಾಮನಗರ: ನಗರದ ಹೊರವಲಯದ ಅಯಾನಾ ಖಾಸಗಿ ರೆಸಾರ್ಟ್ನಲ್ಲಿ ನಡೆದ ರೇವ್ ಪಾರ್ಟಿ ಮೇಲೆ ಬೆಂಗಳೂರಿನ ದಕ್ಷಿಣ ಎಸ್ಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ದಾಳಿ ನಡೆಸಿ, 115 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ದೇವಿಗೆರೆ ಕ್ರಾಸ್ ಸಮೀಪದಲ್ಲಿರುವ ಅಯಾನಾ ಖಾಸಗಿ ರೆಸಾರ್ಟ್ನಲ್ಲಿ ರಾತ್ರಿ ವೇಳೆ ರೇವ್ ಪಾರ್ಟಿ ನಡೆಯುತ್ತಿದೆ ಎನ್ನುವ ಮಾಹಿತಿ ಮೇರೆಗೆ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ, 35 ಯುವತಿಯರು ಸೇರಿದಂತೆ ಒಟ್ಟು 115 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಎಲ್ಲರನ್ನೂ ಬಂಧಿಸಿ ರಾಮನಗರ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ದಾಳಿ ವೇಳೆ ಮಾಧ್ಯಮ ಮತ್ತು ಇತರರು ವಿಡಿಯೋ ಚಿತ್ರೀಕರಣ ಮಾಡಲು ಯತ್ನಿಸಿದಾಗ ಪೊಲೀಸರು ಚಿತ್ರೀಕರಣ ತಡೆದಿದ್ದಾರೆ.
For More Updates Join our WhatsApp Group :
