ಕೋಲಾರ ಆಸ್ಪತ್ರೆಯಲ್ಲಿ ಅಚ್ಚರಿ ಪ್ರಕರಣ.!

ಕೋಲಾರ ಆಸ್ಪತ್ರೆಯಲ್ಲಿ ಅಚ್ಚರಿ ಪ್ರಕರಣ.!

ಮನುಷ್ಯರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಣಿಗಳ ರಕ್ತ ಪರೀಕ್ಷೆ.

ಕೋಲಾರ: ಜನರ ಜೀವ ರಕ್ಷಣೆಗೆಂದು ಇರುವ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಣಿಗಳ ರಕ್ತ ಪರೀಕ್ಷೆ ನಡೆಸಿರುವ ಘಟನೆ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಹೌದು…ಅಚ್ಚರಿ ಅನ್ನಿಸಿರೂ ಸತ್ಯ. ಹೌದು…ಕಳೆದ ಏಳೆಂಟು ತಿಂಗಳಿಂದ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಪ್ರಾಣಿಗಳ ರಕ್ತ ಪರೀಕ್ಷೆ ನಡೆಸಿರುವುದು ಬೆಳಕಿಗೆ ಬಂದಿದೆ. ಕಳೆದ ಏಳೆಂಟು ತಿಂಗಳಿಂದ ಕೋಲಾರ ಜಿಲ್ಲಾಸ್ಪತ್ರೆಯ ರಕ್ತ ಪರೀಕ್ಷಾ ಘಟಕದಲ್ಲಿ ನಾಯಿ ಹಾಗೂ ಬೆಕ್ಕಿನ ರಕ್ತ ಪರೀಕ್ಷೆ ನಡೆಸಿರುವುದು ಕಂಡುಬಂದಿದ್ದು, ರಾಷ್ಟ್ರೀಯ ಆರೋಗ್ಯ ಅಭಿಯಾನ ಎನ್​.ಹೆಚ್​.ಎಂ ಸಿಬ್ಬಂದಿ ರಾಘವೇಂದ್ರ ಎಂಬುವರು ಇಂಥ ಕೃತ್ಯ ಎಸಗಿರುವುದು ತಿಳಿದು ಬಂದಿದೆ. ಹೀಗಾಗಿ ರಾಘವೇಂದ್ರ ವಿರುದ್ದ ಕ್ರಮಕ್ಕೆ ಜಿಲ್ಲಾಶಸ್ತ್ರಚಿಕಿತ್ಸಕ ಡಾ.ಜಗದೀಶ್​ ಶಿಫಾರಸ್ಸು ಮಾಡಿದ್ದಾರೆ.

ಜಿಲ್ಲಾಸ್ಪತ್ರೆಯ ರಕ್ತ ಪರೀಕ್ಷಾ ಪ್ರಯೋಗಾಲಯದಲ್ಲಿನ ಯಂತ್ರಗಳಲ್ಲಿ ಪ್ರಾಣಿಗಳ ರಕ್ತವನ್ನು ಪರೀಕ್ಷೆಗೆ ಒಳಪಡಿಸಿರುವ ಕುರಿತು ಕೆಲವರು ಅನುಮಾನ ವ್ಯಕ್ತಪಡಿಸಿದ್ದರು. ಇಲ್ಲಿನ ಸಿಬ್ಬಂದಿ ಹಾಗೂ ಪ್ರಯೋಗಾಲಯದಲ್ಲಿ ಯಂತ್ರಗಳ ನಿರ್ವಹಣೆ ಮಾಡುವ ಕಂಪನಿಯವರಿಗೆ ಅನುಮಾನ ವ್ಯಕ್ತವಾಗಿತ್ತು. ಈ ಸಂಬಂಧ ರಕ್ತ ಪರೀಕ್ಷಾ ಪ್ರಯೋಗಾಲಯದಲ್ಲಿ ಕೆಲಸ ಮಾಡುವ ಕೆಲವು ಸಿಬ್ಬಂದಿ ಮೇಲಧಿಕಾರಿಗಳಿಗೆ ದೂರು ನಿಡಿದ್ದರು. ಈ ಬಗ್ಗೆ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಜಗದೀಶ್,​ ತನಿಖಾ ತಂಡವನ್ನು ರಚಿಸಿ ಪರಿಶೀಲನೆ ಮಾಡಿಸಿದಾಗ ಕಳೆದ ಏಳೆಂಟು ತಿಂಗಳಿಂದ ಇಲ್ಲಿನ ರಕ್ತ ಪರೀಕ್ಷಾ ಘಟಕದಲ್ಲಿ ನಾಯಿ ಹಾಗೂ ಬೆಕ್ಕಿನ ರಕ್ತಗಳ ಪರೀಕ್ಷೆ ನಡೆಸಿ ವರದಿ ಪಡೆದಿರುವುದು ಬೆಳಕಿಗೆ ಬಂದಿದೆ.

ಇನ್ನು ಆರೋಪ ಹೊತ್ತಿರುವ ರಾಘವೇಂದ್ರ ಅವರನ್ನು ಮಾತನಾಡಿಸಿದಾಗ ಕೆಲವೊಂದು ವರದಿಗಳನ್ನು ಪಡೆದಿದ್ದೇನೆ. ಆದರೆ ಇಲ್ಲಿ ರಕ್ತ ಪರೀಕ್ಷೆ ಮಾಡಿಲ್ಲ. ಬದಲಾಗಿ ಇಲ್ಲಿನ ಕೆಲವು ಸಿಬ್ಬಂದಿ ಒಳಜಗಳದಿಂದ ನನ್ನ ಮೇಲೆ ಆರೋಪ ಮಾಡಲಾಗಿದೆ. ತನ್ನನ್ನು ಕೆಲಸದಿಂದ ತೆಗೆದುಹಾಕಲು ಇಂಥ ಆರೋಪ ಮಾಡಿದ್ದಾರೆ ಎಂದು ತಮ್ಮ ಮೇಲಿನ ಆರೋಪವನ್ನ ತಳ್ಳಿ ಹಾಕಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *