ಪುಣೆ: ಇವತ್ತು ಎಲ್ಲವೂ ಆನ್ಲೈನ್ ಆಗಿರುವುದರಿಂದ ಸೈಬರ್ ಅಪರಾಧಿಗಳಿಗೆ ಹಣ ದೋಚಲು ಒಳ್ಳೆಯ ಮಾರ್ಗಗಳು ಸಿಕ್ಕಿವೆ. ಇತ್ತೀಚೆಗೆ ದೇಶದಲ್ಲಿ ಡಿಜಿಟಲ್ ಅರೆಸ್ಟ್ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬರುತ್ತಿವೆ. ಪುಣೆಯ ಮಹಿಳೆಯೊಬ್ಬರು ಇಂಥದ್ದೇ ಪ್ರಕರಣದಲ್ಲಿ 99 ಲಕ್ಷ ರೂ ಕಳೆದುಕೊಂಡ ಘಟನೆ ನಡೆದಿದೆ. ನಕಲಿ ಸರ್ಕಾರಿ ದಾಖಲೆಗಳನ್ನು ಸೃಷ್ಟಿಸಿ 62 ವರ್ಷದ ಮಹಿಳೆಯೊಬ್ಬಳನ್ನು ಹೆದರಿಸಿ ಆನ್ಲೈನ್ನಲ್ಲೇ ಹಣ ಲಪಟಾಯಿಸಲಾಗಿದೆ. ವಂಚನೆಗೊಳಗಾದ 62 ವರ್ಷದ ಮಹಿಳೆಯು ಪುಣೆಯ ಕೊತ್ರುಡ್ ಎಂಬಲ್ಲಿನ ನಿವಾಸಿಯಾಗಿದ್ದು, ನಿವೃತ್ತ ಎಲ್ಐಸಿ ಅಧಿಕಾರಿಯೂ ಹೌದು.
ಅಕ್ಟೋಬರ್ ಕೊನೆಯ ವಾರದಲ್ಲಿ ಈ ವಂಚನೆ ನಡೆದಿದೆ. ಸೈಬರ್ ಸಿಟಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಡಾಟಾ ಪ್ರೊಟೆಕ್ಷನ್ ಏಜೆನ್ಸಿ ಕಡೆಯವನೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ಪುಣೆಯ ಮಹಿಳೆಯನ್ನು ಸಂಪರ್ಕಿಸುತ್ತಾನೆ. ಆಕೆಯ ಆಧಾರ್ ಜೋಡಿತ ಮೊಬೈಲ್ ನಂಬರ್ ಅನ್ನು ಅಕ್ರಮ ವಹಿವಾಟುಗಳಿಗೆ ದುರ್ಬಳಕೆ ಮಾಡಲಾಗಿದೆ ಎಂದು ಹೇಳುತ್ತಾನೆ.
ನಂತರ ಆ ಮಹಿಳೆಗೆ ಫೋನ್ನಲ್ಲೇ ಪೊಲೀಸ್ ಅಧಿಕಾರಿ ಎನ್ನಲಾದ ಜಾರ್ಜ್ ಮ್ಯಾಥ್ಯೂ ಅವರನ್ನು ಪರಿಚಯಿಸಲಾಗುತ್ತದೆ. ಆ ನಕಲಿ ಪೊಲೀಸ್ ಅಧಿಕಾರಿಯು, ಮಹಿಳೆಯಿಂದ ಅಕ್ರಮ ಹಣ ವರ್ಗಾವಣೆ ಕೃತ್ಯ ಆಗಿದೆ ಎಂದು ಆರೋಪಿಸಿ, ಆಕೆಯ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಎಚ್ಚರಿಸುತ್ತಾನೆ.
For More Updates Join our WhatsApp Group :
