ಅಂಬೇಡ್ಕರ್ ಜಯಂತಿ: ಪೌರಕಾರ್ಮಿಕರಿಗೆ ಸಿಹಿ ವಿತರಣೆ.!

ಅಂಬೇಡ್ಕರ್ ಜಯಂತಿ: ಪೌರಕಾರ್ಮಿಕರಿಗೆ ಸಿಹಿ ವಿತರಣೆ.!

ಬೆಂಗಳೂರು ಕೇಂದ್ರ ನಗರ ಪಾಲಿಕೆಯಲ್ಲಿ ಅಂಬೇಡ್ಕರ್ ಜಯಂತಿ

ಬೆಂಗಳೂರು: ಭಾರತ ರತ್ನ ಡಾ|| ಬಿ.ಆರ್. ಅಂಬೇಡ್ಕರ್ ರವರ ಜಯಂತಿ ಅಂಗವಾಗಿ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಜಂಟಿ ಆಯುಕ್ತರಾದ  ಶ್ರೀ ಹೇಮಂತ್ ಶರಣ್ ರವರು ಸಿ.ವಿ.ರಾಮನ್ ನಗರ ವಿಭಾಗದ ವಾರ್ಡ್ ನಂ.58 ರ ಕಿತ್ತೂರು ರಾಣಿ ಚೆನ್ನಮ್ಮ ಉದ್ಯಾನವನ ಮಸ್ಟರಿಂಗ್ ಸೆಂಟರ್ ನಲ್ಲಿ ಪೌರಕಾರ್ಮಿಕರಿಗೆ, ತೋಟಗಾರಿಕೆ ಮಾಲಿಗಳಿಗೆ, ಗ್ಯಾಂಗ್ ಮೇನ್ ಗಳಿಗೆ ಸಿಹಿ ವಿತರಿಸಿದರು. ಈ ಸಂದರ್ಭದಲ್ಲಿ BSWML DGM ಭೀಮೇಶ್ ನಾಯಕ್, ಎಜಿಎಂ ಹಾಜರಿದ್ದರು.

ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಸುಮಾರು 4,000 ಜನ ಪೌರಕಾರ್ಮಿಕರು, ತೋಟಗಾರಿಕೆ ಮಾಲಿಗಳು, ಗ್ಯಾಂಗ್ ಮೇನ್ ಗಳಿಗೆ ಎಲ್ಲಾ 6 ವಿಭಾಗಗಳಲ್ಲಿ ಕೆ. ಎಂ.ಎಫ್ ಉತ್ಪಾದಿತ ಸಿಹಿಯನ್ನು ಆಯಾ ವಿಭಾಗಗಳಲ್ಲಿ ವಿತರಣೆ ಮಾಡಲಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *