ಉತ್ತರ ಪ್ರದೇಶ: ಭೀಕರ ರಸ್ತೆ ಅಪಘಾತದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. ವೈರಲ್ ಆಗಿರುವ ವಿಡಿಯೋ ಸಿಸಿಟಿವಿ ದೃಶ್ಯವಾಗಿದೆ. ಈ ವಿಡಿಯೋದಲ್ಲಿ ಎದುರಿನಿಂದ ಬಂದ ಕಾರೊಂದು ಬೈಕ್ಗೆ ಡಿಕ್ಕಿ ಹೊಡೆದಿದೆ. ಆದರೆ ಈ ವಿಡಿಯೋ ನೋಡಿದಾಗ ಇದು ಆಕಸ್ಮಿಕವಾಗಿರುವ ಅಪಘಾತವಲ್ಲ, ಉದ್ದೇಶ ಪೂರಕವಾಗಿ ಮಾಡಿರುವ ಕೃತ್ಯ ಎಂದು ಹೇಳಲಾಗುತ್ತಿದೆ.
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ನಲ್ಲಿದ್ದ ಇಬ್ಬರು ಮೈಲು ದೂರ ಹೋಗಿ ಬಿದ್ದಿದ್ದಾರೆ. ಈ ವಿಡಿಯೋವನ್ನು ಪಿಯೂಷ್ ರಾವ್ ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
For More Updates Join our WhatsApp Group :

