ಪಾಟ್ನಾ: ಬಿಹಾರದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಬಹುಮತ ಗಳಿಸಿತ್ತು. ಇದೀಗ 10ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ನವೆಂಬರ್ 20ರಂದು ನಿತೀಶ್ ಕುಮಾರ್ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಎನ್‌ಡಿಎ ಮೈತ್ರಿಕೂಟದೊಳಗೆ ಸಭೆಗಳು ನಡೆಯುತ್ತಿದ್ದು, ಸಚಿವ ಸಂಪುಟ ಹಂಚಿಕೆ ಕುರಿತು ಚರ್ಚೆಗಳು ನಡೆಯುತ್ತಿವೆ. ಏತನ್ಮಧ್ಯೆ, ಲಾಲು ಪ್ರಸಾದ್ ಯಾದವ್ ಕುಟುಂಬದೊಳಗಿನ ಬಿರುಕು ರಾಜಕೀಯ ವಲಯವನ್ನು ಬಿಸಿ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವರು ಸೇರಿದಂತೆ ಎನ್ಡಿಎಯ ಹಲವು ಪ್ರಮುಖ ನಾಯಕರು ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ದಾಖಲೆಯ 10 ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಒಂದು ದಿನ ಮೊದಲು, ನವೆಂಬರ್ 19 ರಂದು ಕುಮಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗುವುದು ಎಂದು ಜೆಡಿಯು ಮೂಲಗಳು ತಿಳಿಸಿವೆ.
ನಾಳೆ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇರುವ ಸಚಿವರು ಬಿಜೆಪಿಯಿಂದ ಸಂಭಾವ್ಯ ಸಚಿವರು ಸಾಮ್ರಾಟ್ ಚೌಧರಿ ವಿಜಯ್ ಕುಮಾರ್ ಸಿನ್ಹಾ ಮಂಗಲ್ ಪಾಂಡೆ ನಿತೀಶ್ ಮಿಶ್ರಾ ನಿತಿನ್ ನವೀನ್ ರೇಣು ದೇವಿ ನೀರಜ್ ಕುಮಾರ್ ಬಬ್ಲು ಸಂಜಯ್ ಸರವಾಗಿ ರಜನೀಶ್ ಕುಮಾರ್
ಜೆಡಿ–ಯು ನಿಂದ ಸಂಭಾವ್ಯ ಸಚಿವರು ವಿಜಯ್ ಕುಮಾರ್ ಚೌಧರಿ ವಿಜೇಂದ್ರ ಯಾದವ್ ಶ್ರವಣ್ ಕುಮಾರ್ ಅಶೋಕ್ ಚೌಧರಿ ರತ್ನೇಶ್ ಸದಾ ಸುನೀಲ್ ಕುಮಾರ್ ಶ್ಯಾಮ್ ರಜಕ್ ಜಮಾ ಖಾನ್ ಲೇಸಿ ಸಿಂಗ್ ದಾಮೋದರ್ ರಾವತ್
For More Updates Join our WhatsApp Group :
