ಚಾಮರಾಜನಗರ : ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಯೋರ್ವ ಕಾಂಗ್ರೆಸ್ ಯುವ ಮುಖಂಡನಿಗೆ ಚಾಕುವಿನಿಂದ ಇರಿದಿರುವಂತಹ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ತೇರಂಬಳ್ಳಿಯಲ್ಲಿ ನಡೆದಿದೆ. ತೇರಂಬಳ್ಳಿ ಗ್ರಾಮದ ರಾಜಣ್ಣ ಎಂಬ ವ್ಯಕ್ತಿಯಿಂದ ಕೈ ಮುಖಂಡ ಸುನೀಲ್ಗೆ ಚಾಕು ಇರಿಯಲಾಗಿದೆ. ಅಗರ-ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಡೆದದ್ದೇನು?
ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಉಂಟಾಗಿದೆ. ಈ ವೇಳೆ ರಾಜಣ್ಣ ಎಂಬುವವರು ಸುನೀಲ್ಗೆ ಚಾಕುವಿನಿಂದ ಇರಿದಿದ್ದಾರೆ. ಚಾಕುವಿನಿಂದ ಇರಿದ ಹಿನ್ನಲೆ ರಕ್ತಸ್ರಾವ ಉಂಟಾಗಿ ಸುನೀಲ್ ಅಸ್ವಸ್ಥರಾಗಿದ್ದಾರೆ. ಕೂಡಲೇ ಗಾಯಾಳು ಸುನೀಲ್ನನ್ನು ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಯುವಕನ ಮೇಲೆ ತಲ್ವಾರ್ನಿಂದ ಇರಿದು ಹಲ್ಲೆ
ಇತ್ತೀಚೆಗೆ ಗದಗ ನಗರದ ಮುಳಗುಂದ ನಾಕಾದಲ್ಲಿರುವ ದುರ್ಗಾ ಬಾರ್ ಎದುರು, ಯುವಕನ ಮೇಲೆ ಡೆಡ್ಲಿ ಅಟ್ಯಾಕ್ ನಡೆದಿತ್ತು. ಬಾರ್ನಲ್ಲಿ ಕುಡಿಯೋದಕ್ಕೆ ಕೂತಿದ್ದ ಅರುಣ್ ಕುಮಾರ್ ಕೋಟೆಕಲ್ ಎಂಬ ಯುವಕನ ಮೇಲೆ, ದಾಸರ ಓಣಿಯ ಮುಸ್ತಾಕ್, ಸಾಹಿಲ್, ಅಭಿಷೇಕ್ ಅನ್ನೋ ಯುವಕರು ಹಲ್ಲೆ ಮಾಡಿದ್ದರು. ಹತ್ತಾರು ಜನರ ಎದುರೇ ತಲ್ವಾರ್, ಬಿಯರ್ ಬಾಟಲ್ನಿಂದ ಮಾರಣಾಂತಿಕ ಹಲ್ಲೆ ಮಾಡಲಾಗಿತ್ತು.
ಇನ್ನು ಘಟನೆಯಲ್ಲಿ ಅರುಣ್ ಕುಮಾರ್ನ ಕತ್ತು, ಮುಖ, ತಲೆ, ಹೊಟ್ಟೆ, ಎದೆ, ಕೈ ಸೇರಿ ದೇಹದ ಭಾಗಗಳಿಗೆ 25ಕ್ಕೂ ಹೆಚ್ಚು ಇರಿತದ ಗಾಯಗಳಾಗಿದ್ದವು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಡಿವೈಎಸ್ಪಿ ಮುರ್ತುಜಾ ಖಾದ್ರಿ, ಶಹರ ಪೊಲೀಸ್ ಠಾಣೆ ಇನ್ಸಪೆಕ್ಟರ್ ಎಲ್ ಕೆ ಜೂಲಕಟ್ಟಿ ಆ್ಯಂಡ್ ಟೀಮ್ ಪರಿಶೀಲನೆ ಮಾಡಿದ್ದರು. ಜೊತೆಗೆ ಗಾಯಾಳುವನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಸದ್ಯ ಹಲ್ಲೆ ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸಿದ್ದಾರೆ.
For More Updates Join our WhatsApp Group :
