ಕರ್ಜಗಿಯಲ್ಲಿ ಹರಿದುಬಂದ ಸಾವಿರಾರು ಅಭಿಮಾನಿಗಳ ಜನಸಾಗರ.
ಹಾವೇರಿ: ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೆಸರು ಮಾಡಿದ್ದ ಕೊಬ್ಬರಿ ಹೋರಿಯು ಅನಾರೋಗ್ಯದಿಂದ ಸಾವನ್ನಪ್ಪಿದ ಘಟನೆ ಹಾವೇರಿ ತಾಲ್ಲೂಕಿನ ಕರ್ಜಗಿ ಗ್ರಾಮದಲ್ಲಿ ನಡೆದಿದೆ. ಜಗದೀಶ್ ನಾಗಪ್ಪ ಮಾಣೆಗರ ಎನ್ನುವರಿಗೆ ಸೇರಿದ್ದ ಕರ್ಜಗಿ ಓಂ-112 ಹೆಸರಿನ ಹೋರಿ ಅನಾರೋಗ್ಯದಿಂದ ಸಾವನ್ನಪ್ಪಿದೆ. ಇನ್ನು ಈ ಹೋರಿ ರಾಜ್ಯ ಮಟ್ಟದ ಹೋರಿ ಸ್ಪರ್ಧೆಯಲ್ಲಿ ಭಾಗವಹಿಸಿ ಇದುವರೆಗೂ ಮೂರು ಬೈಕ್, ಬೆಳ್ಳಿ ಗದೆ, ಟ್ರಜೂರಿ ಸೇರಿದಂತೆ ಹಲವು ಬಹುಮಾನ ಗೆದ್ದಿದ್ದು, ಅಭಿಮಾನಿಗಳ ಪೈಲ್ವಾನ್ ಎಂದು ಹೆಸರು ಮಾಡಿತ್ತು. ಇಷ್ಟೆಲ್ಲಾ ಸಾಧನೆ ಮಾಡಿರುವ ಹೋರಿಯನ್ನು ಕಳೆದುಕೊಂಡು ಮಾಲೀಕ ಕಣ್ಣೀರಿಟ್ಟಿದ್ದಾನೆ. ಇನ್ನು ಹೋರಿ ಅಂತಿಮ ದರ್ಶನ ಪಡೆಯಲು ಸಾವಿರಾರು ಅಭಿಮಾನಿಗಳು ಆಗಮಿಸಿದ್ದು, ಅಂತಿಮವಾಗಿ ಊರಿನ ಪ್ರಮುಖ ಬೀದಿಯಲ್ಲಿ ಭವ್ಯ ಮೆರವಣಿಗೆ ನಡೆಸಿ ಮಾಲೀಕನ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯ್ತು.
For More Updates Join our WhatsApp Group :




