ಹುಬ್ಬಳ್ಳಿ: ಒಟ್ಟಿಗೆ ಬಾಳಿ, ಬದುಕಿದ ದಂಪತಿಯು ಸಾವಿನಲ್ಲೂ ಒಂದಾದ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ನಡೆದಿದೆ. ಹೃದಯಾಘಾತದಿಂದ ಪತಿ ಸಾವನ್ನಪ್ಪಿದರೆ, ವಯೋಸಹಜ ಕಾಯಿಲೆಯಿಂದ ಪತ್ನಿ ಮೃತಪಟ್ಟಿದ್ದಾರೆ.
ಕುಸುಗಲ್ ಗ್ರಾಮದಲ್ಲಿ ಇಂದು ಮುಂಜಾನೆ 6 ಗಂಟೆ ಸುಮಾರಿಗೆ ಶಂಕ್ರಪ್ಪ ಹೊಂಬಳ (72) ಹೃದಯಾಘಾತದಿಂದ ನಿಧನರಾಗಿದ್ದರು. ಮಧ್ಯಾಹ್ನದ ಒಂದು ಗಂಟೆ ವೇಳೆಗೆ ಶಂಕ್ರಪ್ಪ ಅವರ ಪತ್ನಿ ಅನ್ನಪೂರ್ಣ (62) ಕೂಡ ಸಾವನ್ನಪ್ಪಿದ್ದಾರೆ.
ಅನ್ನಪೂರ್ಣ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಒಂದೇ ದಿನ ಸತಿ-ಪತಿ ನಿಧನಹೊಂದಿದ್ದು, ಸಾವಿನಲ್ಲೂ ಒಂದಾಗಿದ್ದಾರೆ. ದಂಪತಿಯ ಸಾವಿಗೆ ಇಡೀ ಗ್ರಾಮದ ಜನ ಕಂಬನಿ ಮಿಡಿದಿದ್ದಾರೆ.