ಮಂಗಳೂರು: ಇತ್ತೀಚಿಗೆ ವೈದ್ಯರು ಕನ್ನಡದಲ್ಲಿ ಚೀಟಿ ಬರೆದು ನೀಡುತ್ತಿರುವುದು ವೈರಲ್ ಆಗುತ್ತಿದೆ. ಅಂತೆಯೇ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ದಂತ ವೈದ್ಯರೊಬ್ಬರು ಕನ್ನಡದಲ್ಲಿ ಚೀಟಿ ಬರೆದು ತಮ್ಮ ಕನ್ನಡ ಪ್ರೇಮವನ್ನು ಮೆರೆದಿದ್ದಾರೆ. ಕರ್ನಾಟಕದಲ್ಲಿ ಕನ್ನಡದಲ್ಲಿ ವೈದ್ಯರು ಔಷಧ ಚೀಟಿ ನೀಡುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸೂಚನೆ ನೀಡಿರುವುದು ಇನ್ನೂ ಕಟ್ಟುನಿಟ್ಟು ಜಾರಿಯಾಗುವ ಮೊದಲೇ ಗಡಿನಾಡು ಕೇರಳದ ಕಾಸರಗೋಡಿನಲ್ಲಿ ಕನ್ನಡದಲ್ಲೇ ಔಷಧ ಚೀಟಿ ನೀಡುವ ಮೂಲಕ ಡಾ. ಮುರಳಿ ಮೋಹನ್ ಕನ್ನಡ ಪ್ರೇಮವನ್ನು ವ್ಯಕ್ತಪಡಿಸಿದ್ದಾರೆ. ಈಗ ರಾಜ್ಯದಲ್ಲಿ ಇದು ಕೂಡ ಸಾಕಷ್ಟು ವೈರಲಾಗುತ್ತಿದ್ದು ಆರೋಗ್ಯ ಸಚಿವರು ಪತ್ರಿಕಾ ಹೇಳಿಕೆ ಹೊರಡಿಸಿ ಈ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಿ ಸಿಎಂ ಒಟ್ಟಿಗೆ ಚರ್ಚೆ ನಡೆಸಿ ಬಳಿಕ ಸಾಧಕ ಬಾದಕ ನೋಡಿಕೊಂಡು ಅನುಷ್ಠಾನಕ್ಕೆ ತರಲಾಗುವುದು ಎಂದಿದ್ದಾರೆ.
ಗಡಿನಾಡಲ್ಲಿ ಕನ್ನಡದಲ್ಲಿ ಔಷಧಿ ಚೀಟಿ ನೀಡಿದ ವೈದ್ಯ.
