ಸಾಮಾನ್ಯವಾಗಿ ಟೆನ್ನಿಸ್ ಅಭಿಮಾಗಳು ಕ್ರೀಡಾಂಗಣದಲ್ಲಿ ಟೆನ್ನಿಸ್ ಆಟ ನೋಡೋದಕ್ಕೆ ಅಂತ ಹೋಗ್ತಾರೆ. ಆದರೆ ಅಚ್ಚರಿ ಎಂಬಂತೆ ಇಲ್ಲೊಂದು ಶ್ವಾನ ಟೆನ್ನಿಸ್ ಕ್ರೀಡೆಗೆ ಅಭಿಮಾನಿಯಾಗಿ ಬಿಟ್ಟೆದೆ.
ಅತ್ಯಂತ ಉತ್ಸೂಕತೆಯಿಂದ ಟೆನ್ನಿಸ್ ಗೇಮ್ ಆಡುವುದನ್ನು ನೋಡುತ್ತಿರುವ ಶ್ವಾನದ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಅಸಲಿಗೆ ಈ ಘಟನೆ ನಡೆದಿರುವುದು ಬ್ರೆಜಿಲ್ ದೇಶದಲ್ಲಿ. ಆರಂಭದಲ್ಲಿ “ಐಕಾ ಸಮೊಯೆದ್” ಎಂಬ ವ್ಯಕ್ತಿ ಇದನ್ನು ಹಂಚಿಕೊಂಡಿದ್ದು, ವಿಡಿಯೋದಲ್ಲಿ ಶ್ವಾನವು ಟೆನ್ನಿಸ್ ಅಭಿಮಾನಿಯಂತೆ ಕುಳಿತು ಚಂಡಿನ ಚಲನೆಗೆ ತಕ್ಕಂತೆ ತನ್ನ ಕತ್ತನ್ನು ಅತ್ತಿಂದಿತ್ತ ತಿರುಗಿಸುತ್ತಿರುವುದನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿಯಲಾಗಿದೆ.
ಈ ನಾಲ್ಕು ಕಾಲಿನ ಟೆನ್ನಿಸ್ ಅಭಿಮಾನಿ. “ಚೆಂಡನ್ನು ಕಸಿದುಕೊಳ್ಳಲು ಸರಿಯಾದ ಕ್ಷಣಕ್ಕಾಗಿ ಕಾಯುತ್ತಿದೆ” ಎಂದು ಬಳಕೆದಾರರೊಬ್ಬರು ಹೇಳಿದರೆ, ಮತ್ತೊಬ್ಬ ಬಳಕೆದಾರರು “ಶ್ವಾನ ತನ್ನ ಕಾಲುಗಳಿಂದ ಚಪ್ಪಾಳೆ ತಟ್ಟುವುದನ್ನು ನೋಡಲು ನಾನು ಕಾಯುತ್ತಿದ್ದೆನೆ” ಎಂದು ಕಾಮೆಂಟ್ ಬಾಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.