ಹಾಸನ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಮಾಧ್ಯಮದವರು ಗೃಹಲಕ್ಷ್ಮಿ ಯೋಜನೆಯ ದುಡ್ಡು ಮೂರ್ನಾಲ್ಕು ತಿಂಗಳಿಂದ ಫಲಾನುಭವಿಗಳ ಖಾತೆಗೆ ಜಮಾ ಆಗಿಲ್ಲ ಅಂತ ಹೇಳಿದಾಗೆಲ್ಲ ಹಾಗೇನೂ ಇಲ್ಲ, ಕೊಂಚ ಟೆಕ್ನಿಕಲ್ ಸಮಸ್ಯೆ ಇತ್ತು, ಇನ್ನೊಂದೆರಡು ದಿನಗಳಲ್ಲಿ ಹಣ ಸೇರುತ್ತೆ ಅನ್ನುತ್ತಾರೆ! ಪ್ರತಿಬಾರಿ ಅದೇ ಹೇಳಿಕೆ. ಹಾಸನದ ಸರೋಜ ಹೆಸರಿನ ಹೂವಾಡಗಿತ್ತಿ ಸರ್ಕಾರ ನಮ್ಮನ್ನು ನಂಬಿಸಿ ವೋಟು ಹಾಕಿಸಿಕೊಂಡು ಮೋಸ ಮಾಡುತ್ತಿದೆ ಎನ್ನುತ್ತಾರೆ.
ಮಕ್ಕಳ ವಿದ್ಯಾಭ್ಯಾಸಕ್ಕೆ ಅಂತ ಹಣ ಬಳಸುತ್ತಿದ್ದೆವು, ಮೂರು ತಿಂಗಳಿಂದ ಹಣ ಸಿಕ್ಕಿಲ್ಲ, ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಹುನ್ನಾರ ಮಾಡುತ್ತಿದೆಯಂತೆ, ಸಿಎಂ ಸಿದ್ದರಾಮಯ್ಯ ನಂಬರ್ ಇದ್ದಿದ್ದರೆ ನಾನೇ ಫೋನ್ ಮಾಡುತ್ತಿದ್ದೆ ಎನ್ನುತ್ತಾರೆ.
For More Updates Join our WhatsApp Group :