ಬೆಂಗಳೂರು : ಬಿಎಂಟಿಸಿ ಬಸ್ ಚಾಲಕನ ಅಜಾಗರೂಕತೆಗೆ ಯುವಕ ಬಲಿಯಾಗಿರುವ ಘಟನೆ ಬೆಂಗಳೂರು ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ನಡೆದಿದೆ.
ಕಳೆದ ರಾತ್ರಿ 12.15 ರ ಸುಮಾರಿಗೆ ಈ ಅಪಘಾತ ನಡೆದಿದೆ. ಬಸ್ ನಿಲ್ದಾಣದಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿಶೇಷ ಚೇತನ ಯುವಕನಿಗೆ ಅತಿವೇಗದಿಂದ ಬಂದ ಬಿಎಂಟಿಸಿ ಬಸ್ ನಿಯಂತ್ರಣಕ್ಕೆ ಸಿಗದೇ ಯುವಕನ ಮೇಲೆ ಬಸ್ ಮುಂದಿನ ಚಕ್ರ ಹರಿದಿದೆ. ಈ ವೇಳೆ ಸ್ಥಳದಲ್ಲೇ ಅಪರಿಚಿತ ಯುವಕ ಸಾವನ್ನಪ್ಪಿದ್ದಾನೆ.
ಕೆಎ 57 ಎಫ್ 4330 ನಂಬರ್ ನ ಬಿಎಂಟಿಸಿ ಬಸ್ ಇದಾಗಿದ್ದು, ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತ ಯುವಕನ ಗುರುತು ಪತ್ತೆಗೆ ಮುಂದಾದ ಪೊಲೀಸರು ಮುಂದಾಗಿದ್ದಾರೆ. ಬಿಎಂಟಿಸಿ ಬಸ್ ಚಾಲಕ ಗೋಪಾಲ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ, ಬಿಎಂಟಿಸಿ ಬಸ್ ಚಾಲಕನ ಅಜಾಗರೂಕತೆಯೇ ಘಟನೆಗೆ ಕಾರಣ ಎನ್ನಲಾಗಿದೆ. ಬಸ್ ನಿಲ್ದಾಣದ ಎಂಟ್ರಿ ಪಾಯಿಂಟ್ ನಲ್ಲಿ ಅತೀ ವೇಗದಿಂದ ಬಸ್ಸುಗಳು ಬರುವುದೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.




