ಮನೆ ಮೇಲೆ ಬಿದ್ದ ಕಲ್ಲು ಮಾರಾಟ ಮಾಡಿ ಕೋಟ್ಯಾಧಿಪತಿಯಾದ ವ್ಯಕ್ತಿ!

ಮನೆ ಮೇಲೆ ಬಿದ್ದ ಕಲ್ಲು ಮಾರಾಟ ಮಾಡಿ ಕೋಟ್ಯಾಧಿಪತಿಯಾದ ವ್ಯಕ್ತಿ!

ಇಂಡೋನೇಷ್ಯಾ : ಅದೃಷ್ಟವಿದ್ದರೆ ಒಬ್ಬರು ಒಂದೇ ರಾತ್ರಿಯಲ್ಲಿ ಕೋಟ್ಯಾಧಿಪತಿಯಾಗಬಹುದು. ಇಂಡೋನೇಷ್ಯಾದಲ್ಲಿ ವಾಸಿಸುವ ಒಬ್ಬರಿಗೂ ಹಾಗೆಯೇ ಆಯಿತು. ಜೋಶುವಾ ಹುಟಗಲುಂಗ್ ಎಂಬ ವ್ಯಕ್ತಿ ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅವರಿಗೆ ಜಾಕ್‌ಪಾಟ್ ಹೊಡೆಯಿತು. ಇದರಿಂದ ಒಂದೇ ರಾತ್ರಿಯಲ್ಲಿ ಅವರು ಕೋಟ್ಯಾಧಿಪತಿಯಾದರು. ಜೋಶುವಾ ಒಂದು ದಿನ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ, ಇದ್ದಕ್ಕಿದ್ದಂತೆ ಜೋರಾದ ಶಬ್ದ ಕೇಳಿ ಕೋಣೆಗೆ ಓಡಿ ಬಂದು ನೋಡಿದಾಗ ದೊಡ್ಡ ಕಲ್ಲು ಬಿದ್ದಿರುವುದನ್ನು ಕಂಡರು.

ಆ ಕಲ್ಲನ್ನು ನೋಡಿ ಜೋಶುವಾ ಆಶ್ಚರ್ಯಚಕಿತರಾದರು. ವಾಸ್ತವವಾಗಿ, ಅದು ಸಾಮಾನ್ಯ ಕಲ್ಲಲ್ಲ, ಉಲ್ಕಾಶಿಲೆ. ಈ ಉಲ್ಕಾಶಿಲೆಯೇ ಅವರ ಜೀವನವನ್ನೇ ಬದಲಾಯಿಸಿತು. ಆ ಕಲ್ಲನ್ನು ಅವರು 1.4  ಮಿಲಿಯನ್ ಪೌಂಡ್‌ಗಳಿಗೆ ಅಂದರೆ ಭಾರತೀಯ ಮೌಲ್ಯದಲ್ಲಿ 14 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ.

ಇಂಡೋನೇಷ್ಯಾದ ಉತ್ತರ ಸುಮಾತ್ರಾದ ಕೋಲಾಂಗ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಇಷ್ಟು ಬೆಲೆಗೆ ಮಾರಾಟವಾದ ಈ ಕಲ್ಲಿನ ವಿಶೇಷತೆ ಏನೆಂದು ನೀವು ಯೋಚಿಸಬಹುದು. ಜೋಶುವಾ ಅವರ ಮನೆಯಲ್ಲಿ ಬಿದ್ದ ಉಲ್ಕಾಶಿಲೆ 2.1 ಕಿಲೋ ತೂಕದ ಅಪರೂಪದ ಕಲ್ಲು. ಇದು 4.5 ಶತಕೋಟಿ ವರ್ಷಗಳಷ್ಟು ಹಳೆಯದು ಎಂದು ತಜ್ಞರು ಹೇಳುತ್ತಾರೆ. ಬಾಹ್ಯಾಕಾಶ ಆಧಾರಿತ ಸಂಸ್ಥೆಯು ಇದು ಅತ್ಯಂತ ಅಪರೂಪದ CM1/2 ಕಾರ್ಬೊನೇಸಿಯಸ್ ಕಾಂಡ್ರೈಟ್ ಎಂದು ಪರಿಗಣಿಸಿದೆ. ಶೇಕಡಾ 85 ರಷ್ಟು ಉಲ್ಕಾಶಿಲೆಗಳು ಈ ವಸ್ತುವಿನಿಂದ ತಯಾರಿಸಲ್ಪಟ್ಟಿವೆ. ಈ CM1/2 ಒಂದು ಅಪರೂಪದ ಮಿಶ್ರಣವಾಗಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *