ಬ್ರಾಂಡ್ ಬೆಂಗಳೂರು ಯೋಜನೆಯಡಿ ಬಿಡಬ್ಲೂಎಸ್ ಎಸ್ ಬಿಯಿಂದ ಹೊಸ ಪ್ಲಾನ್…

ಬ್ರಾಂಡ್ ಬೆಂಗಳೂರು ಯೋಜನೆಯಡಿ ಬಿಡಬ್ಲೂಎಸ್ ಎಸ್ ಬಿಯಿಂದ ಹೊಸ ಪ್ಲಾನ್...

ಬೆಂಗಳೂರು : ಬೆಂಗಳೂರಲ್ಲಿ ಇದುವರೆಗೂ ನಮ್ಮ ಮೆಟ್ರೋದ ಅಂಡರ್ ಗ್ರೌಂಡ್ ಕಾಮಗಾರಿ ನಡೆಯುತ್ತಿತ್ತು.ಆದ್ರೀಗ ಮೆಟ್ರೋದಂತೆ ಬೆಂಗಳೂರು ಜಲಮಂಡಳಿ ಸಹ ಇದೇ ಮೊದಲ ಬಾರಿಗೆ ಭೂಗತ  ಸುರಂಗ ಮಾರ್ಗಗಳನ್ನು ಕೊರೆಯುತ್ತಿದೆ.

ಬೆಂಗಳೂರನ್ನು ಬ್ರಾಂಡ್ ಬೆಂಗಳೂರು ಮಾಡಬೇಕು ಅನ್ನೋದು ಸರ್ಕಾರದ ಕನಸು.ಈ ನಿಟ್ಟಿನಲ್ಲಿ ಬೆಂಗಳೂರು ಜಲಮಂಡಳಿ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿದೆ.ಈ ಯೋಜನೆಯಡಿ ಇದೇ ಮೊದಲ ಬಾರಿಗೆ ನಮ್ಮ ಮೆಟ್ರೋದಂತೆ ಭೂಮಿಯ ಒಳಗೆ ಮೈಕ್ರೋ ಟನಲಿಂಗ್ ನಿರ್ಮಿಸಿದೆ.ಅಂದ್ರೇ ಒಳಚರಂಡಿ ನಿರ್ಮಿಸಲು ಹಾಗೂ ನೀರಿನ ಪೈಪ್ ಲೈನ್ ಗಾಗಿ ಭೂಮಿಯ ಒಳಗಡೆ ಭೂಗತ ಸುರಂಗ ಮಾರ್ಗಗಳನ್ನು ನಿರ್ಮಿಸುತ್ತಿದೆ.ಅಂಡರ್ ಗ್ರೌಂಡ್ ಮೆಟ್ರೋ ನಿರ್ಮಾಣಕ್ಕೆ ಬಳಸಿದ ಸುರಂಗ ಯಂತ್ರಗಳನ್ನು ಬಳಸಿ ಟನಲ್ ಗಳನ್ನು ನಿರ್ಮಾಣ ಮಾಡಲಾಗುತ್ತಿದೆ.ಪ್ರಮುಖವಾಗಿ ಈ ಟನಲ್ ಗಳನ್ನು ಜನನಿಬಿಡ ಪ್ರದೇಶಗಳಲ್ಲಿ,ಬಿಲ್ಡಿಂಗ್ ಗಳ ಕೆಳಗೆ, ಮರ,ಕೆರೆ,ರಸ್ತೆಗಳನ್ನು  ಕೆಡವದೇ ಅಂಡರ್ ಗ್ರೌಂಡ್ ನಲ್ಲಿ ನೀರಿನ ಪೈಪ್ಲೈನ್  ವಿಸ್ತರಣೆಗಾಗಿ,ಒಳಚರಂಡಿ ವ್ಯವಸ್ಥೆ ನಿರ್ಮಿಸಲು ಟನಲ್ ಗಳನ್ನು ನಿರ್ಮಿಸುತ್ತಿದೆ.

ಇನ್ನೂ ಬೆಂಗಳೂರಲ್ಲಿ ಜಲಮಂಡಳಿಯ ಕಾಮಗಾರಿಯಿಂದ ತಿಂಗಳಾನುಗಟ್ಟಲೇ ರಸ್ತೆ ಅಗೆದಯ ಟ್ರಾಫಿಕ್ ಉಂಟಾಗುತ್ತಿತ್ತು.ರಸ್ತೆ ಅಗೆತದಿಂದ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿತ್ತು.ಅಂಡರ್ ಗ್ರೌಂಡ್ ಟನಲ್ ಮಾಡುವುದಿಂದ ರಸ್ತೆ ಅಗೆತ,ಬಿಲ್ಡಿಂಗ್ ಕೆಡೆವುದು ಸೇರಿದಂತೆ ಹಲವು ಸಮಸ್ಯೆಗಳು ತಪ್ಪಲಿವೆ.ಮೊದಲ ಹಂತದಲ್ಲಿ ಬೆಂಗಳೂರಿನ ಆಗ್ನೇಯ ಭಾಗದ ಸರ್ಜಾಪುರ ರಸ್ತೆಯ ಕೈಕೊಂಡ್ರಹಳ್ಳಿ ಕೆರೆಯಲ್ಲಿ ಸುಮಾರು ೧೨೦ ಮೀಟರ್ ಸುರಂಗ ಮಾರ್ಗ ನಿರ್ಮಾಣ ನಡೆಯುತ್ತಿದೆ.ಇದ್ರಿಂದ ಪೈಪ್ ಲೈನ್ ಗಳು ಸುರಕ್ಷಿತವಾಗಿರಲಿವೆ.ಈ ಸುರಂಗ ಮಾರ್ಗದ ನಂತರ ನಗರದ ಹಲವೆಡೆ ಭೂಗತ ಸುರಂಗ ಮಾರ್ಗಗಳನ್ನು ನಿರ್ಮಿಸುವ ಯೋಜನೆಯನ್ನು ಜಲಮಂಡಳಿ ಹಾಕಿಕೊಂಡಿದೆ. ಒಟ್ನಲ್ಲಿ ಬೆಂಗಳೂರು ಜಲಮಂಡಳಿಯ ಈ ಕಾರ್ಯ ಮುಂದಿನ ದಿನಗಳಲ್ಲಿ ಎಷ್ಟರ ಮಟ್ಟಿಗೆ ಸಕ್ಸಸ್ ಅಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *