ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಬಿಜೆಪಿ ಶಾಸಕ ಮುನಿರತ್ನ ನಾಯ್ಡು ನಡುವಿನ ತಿಕ್ಕಾಟ, ಸಂಘರ್ಷ, ಜಗಳ ಎಲ್ಲರಿಗೂ ಗೊತ್ತಿರುವ ಸಂಗತಿ. ಇವತ್ತು ವಿಧಾನಸಭಾ ಅಧಿವೇಶನದಲ್ಲಿ ಇಬ್ಬರ ನಡುವೆ ಮೆಟ್ರೋ ಸ್ಟೇಷನೊಂದಕ್ಕೆ ಹೆಸರಿಡುವ ವಿಷಯಕ್ಕೆ ಸಂಬಂಧಿಸಿದಂತೆ ಜುಗಲ್ ಬಂದಿ ನಡೆಯಿತು.
ಬ್ಯಾಟರಾಯನಪುರ ಮತಕ್ಷೇತ್ರದಲ್ಲಿ ಬರುವ ಮೆಟ್ರೋ ಸ್ಟೇಶನ್ ಸುತ್ತಮುತ್ತ ಎಂಬೇಸಿ ಸಂಸ್ಥೆಯು 200-250 ಎಕರೆ ಜಮೀನು ಹೊಂದಿದೆ, ಮೆಟ್ರೋ ಸ್ಟೇಶನ್ ಕಟ್ಟೋದಿಕ್ಕೆ ₹140 ಕೋಟಿ ಆಗುತ್ತದೆ, ಎಂಬೇಸಿ ಸಂಸ್ಥೆಯವರು ₹120 ಕೋಟಿ ನೀಡಿದರೆ ಅವರು ಸೂಚಿಸುವ ಹೆಸರಿಡುತ್ತೇನೆ, ಮುನಿರತ್ನ ಅದೇ ಭಾಗದಲ್ಲಿ ಸುಮಾರು 80 ಎಕರೆ ಜಮೀನು ಹೊಂದಿದ್ದಾರೆ, ಅವರೇನಾದರೂ ₹120 ಹಣ ನೀಡಿದರೆ ಅವರ ಹೆಸರನ್ನೇ ಸ್ಟೇಶನ್ಗೆ ಇಡುತ್ತೇವೆ ಎಂದು ಶಿವಕುಮಾರ್ ಹೇಳುತ್ತಾರೆ.
For More Updates Join our WhatsApp Group :




