ಅಪ್ರಾಪ್ತ ಬಾಲಕನ ಮೇಲೆ‌ ಎರಗಿದ ಬೀದಿ ನಾಯಿ

ಅಪ್ರಾಪ್ತ ಬಾಲಕನ ಮೇಲೆ ಎರಗಿದ ಬೀದಿ ನಾಯಿ

ತುಮಕೂರು:- ದಿನೇ ದಿನೇ ನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು, ಅಪ್ರಾಪ್ತ ಬಾಲಕನ ಮೇಲೆ‌ ಬೀದಿ ನಾಯಿ ಎರಗಿ ಕಚ್ಚಿ ಗಾಯಗೊಳಿಸಿದೆ.

ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದ 6ನೇ ವಾರ್ಡ್ ನಲ್ಲಿ ಈ ಘಟನೆ ನಡೆದಿದೆ. ಕೊರಟಗೆರೆ ಪಟ್ಟಣದಲ್ಲಿಯೂಬ  ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ.

ಗಣಪತಿ ನೋಡಲು ಹೋದಾಗ ದಾಳಿ ಮಾಡಿರುವ ಬೀದಿ ನಾಯಿ,‌ ಬಾಲಕನ ಕೈ ಕಾಲುಗೆ ಕಚ್ಚಿ ಗಾಯಗೊಳಿಸಿದೆ. ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬೀದಿ ನಾಯಿಗಳ ಹಾವಳಿ ತಡೆಯಲು ಸ್ಥಳೀಯರು ಒತ್ತಾಯ ಕೇಳಿಬಂದಿದೆ. ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Leave a Reply

Your email address will not be published. Required fields are marked *