ಧರ್ಮಸ್ಥಳ ಕೇಸಿಗೆ ಟ್ವಿಸ್ಟ್! ಅನಾಮಿಕನ ಮುಖವಾಡ ಕಳಚಿದ ಗೆಳೆಯ ರಾಜು.

ಧರ್ಮಸ್ಥಳ ಕೇಸಿಗೆ ಟ್ವಿಸ್ಟ್! ಅನಾಮಿಕನ ಮುಖವಾಡ ಕಳಚಿದ ಗೆಳೆಯ ರಾಜು.

ಮಂಡ್ಯ : ಧರ್ಮಸ್ಥಳದಲ್ಲಿ ನೂರಾರು ಶವ ಹೂತಿರುವುದಾಗಿ ಅನಾಮಿಕ ಮಾಸ್ಕ್ ಮ್ಯಾನ್ ಆರೋಪ ಮಾಡಿದ್ದು, ಈ ಸಂಬಂಧ ಎಸ್ಐಟಿ ಅಧಿಕಾರಿಗಳು ಮಾಸ್ಕ್ ಮ್ಯಾನ್ ತೋರಿಸಿದ ಸ್ಥಳಗಳಲ್ಲಿ ಅಗೆದು ಶೋಧ ಕಾರ್ಯ ನಡೆಸಿದ್ದಾರೆ. ಆದ್ರೆ, ಎರಡು ಸ್ಥಳಗಳಲ್ಲಿ ಒಂದೆಡೆ ಅಸ್ಥಿಪಂಜರ ಸಿಕ್ಕಿದ್ದರೆ, ಮತ್ತೊಂದು ಜಾಗದಲ್ಲಿ ಮಾನವನ ಮೂಳೆಗಳು ಪತ್ತೆಯಾಗಿವೆ. ಸದ್ಯ ಎಸ್ಐಟಿ ಅಧಿಕಾರಿಗಳು ಉತ್ಖನನ ಕಾರ್ಯ ಸ್ಥಗಿತಗೊಳಿಸಿದ್ದು, ಮಾಸ್ಕ್ ಮ್ಯಾನ್ ನನ್ನು ವಿಚಾರಣೆಗೊಳಪಡಿಸಿದ್ದಾರೆ. ಇದರ ನಡುವೆ ಧರ್ಮಸ್ಥಳದಲ್ಲೇ ಕೆಲಸ ಮಾಡಿದ್ದ ಮಾಸ್ಕ್ ಮ್ಯಾನ್ ನ ಸ್ನೇಹಿತ ರಾಜು ಎನ್ನುವಾತನನ್ನು ಸಹ ಎಸ್ ಐಟಿ ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ.

ರಾಜು, 10 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಕೆಲಸ ಮಾಡಿದ್ದೇನೆ. ಮಾಸ್ಕ್ ಹಾಕಿರುವ ವ್ಯಕ್ತಿ, ನಾನು ಅಕ್ಕಪಕ್ಕದ ಮನೆಯವರು ನಾನು ಇದ್ದಾಗ ನೋಡಿದ್ದು ಕೇವಲ ಎರಡು ಶವಗಳು ಅಷ್ಟೇ. ಅದರಲ್ಲಿ ಒಂದು ಗಂಡು, ಇನ್ನೊಂದು ಹೆಣ್ಣು ಶವ. ಆ ಶವಗಳು ಕೊಳೆತ ಸ್ಥಿತಿಯಲ್ಲಿತ್ತು, ಆದ್ರೆ ನಾನು ಹೂತು ಹಾಕಿಲ್ಲ. ಮರದಿಂದ ಇಳಿಸಿ ನದಿಯಲ್ಲಿ ಇದ್ದಿದ್ದನ್ನು ತೆಗೆದು ವೈದ್ಯರಿಗೆ ನೀಡಿದ್ದೆ. ಈ ವೇಳೆ ಮಾಸ್ಕ್ಮ್ಯಾನ್ ಅವರ ಅಣ್ಣ ಎಲ್ಲಾ ಜೊತೆಗಿದ್ದರು. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವುದು ಸುಳ್ಳು ಎಂದು ಸ್ಫೋಟಕ ಅಂಶ ಬಿಚ್ಚಿಟ್ಟಿದ್ದಾರೆ.

ಮಾಸ್ಕ್ ಮ್ಯಾನ್ ಸುಳ್ಳು ಹೇಳುತ್ತಿದ್ದಾನೆ. ದುಡ್ಡಿನ ಆಸೆಗೆ  ಸುಳ್ಳು ಹೇಳುತ್ತಿದ್ದಾನೋ ಏನೋ. ಧರ್ಮಾಧಿಕಾರಿ ವಿರುದ್ಧ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಸ್ನಾನಘಟ್ಟ, ಬಾಹುಬಲಿ ಬೆಟ್ಟ, ದೇವಸ್ಥಾನದ ಬಳಿ ಕೆಲಸ ಮಾಡಿದ್ದೇನೆ. ನನಗೆ ಸ್ವಲ್ಪ ಸಮಸ್ಯೆಯಾಯಿತು, ಹಾಗಾಗಿ ಅಲ್ಲಿ ಕೆಲಸ ಬಿಟ್ಟು ಬಂದೆ. ಅರ್ಧ ಗಂಟೆ ನನ್ನನ್ನು ಎಸ್ಐಟಿ ಅಧಿಕಾರಿಗಳು ವಿಚಾರಣೆ ಮಾಡಿದ್ರು ಎಂದುರಾಜು ಹೇಳಿದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *