ಮದ್ದೂರು ಸಂಘರ್ಷ ಬೆನ್ನಲ್ಲೇ ಮಂಡ್ಯ ಹೆಚ್ಚುವರಿ ಎಸ್ಪಿ ವರ್ಗಾವಣೆ – ಗೃಹ ಸಚಿವ ಪರಮೇಶ್ವರ್ ನೀಡಿದ ಸ್ಪಷ್ಟನೆ!

ಮದ್ದೂರು ಸಂಘರ್ಷ ಬೆನ್ನಲ್ಲೇ ಮಂಡ್ಯ ಹೆಚ್ಚುವರಿ ಎಸ್ಪಿ ವರ್ಗಾವಣೆ – ಗೃಹ ಸಚಿವ ಪರಮೇಶ್ವರ್ ನೀಡಿದ ಸ್ಪಷ್ಟನೆ!

ಬೆಂಗಳೂರು:ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದ ಕಲ್ಲೆಸೆತ ಘಟನೆ ಬಳಿಕ ಮಂಡ್ಯ ಹೆಚ್ಚುವರಿ ಎಸ್ಪಿ-1 ತಿಮ್ಮಯ್ಯ ಅವರನ್ನು ಸರ್ಕಾರ ತಕ್ಷಣ ವರ್ಗಾವಣೆ ಮಾಡಿತ್ತು. ಈ ನಿರ್ಧಾರ ಹಲವು ಪ್ರಶ್ನೆಗಳನ್ನು ಎಬ್ಬಿಸಿದ್ದರೂ, ಈಗ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಪರಮೇಶ್ವರ್ ಹೇಳಿದ್ದೇನು?

* ಘಟನೆಯಲ್ಲಿ ಆಂತರಿಕ ಭದ್ರತಾ ಲೋಪ ಕಂಡುಬಂದಿತ್ತು.

* ಲೋಪ ಕಂಡಾಗ ಇಲಾಖೆ ಯಾರೇ ಆಗಿರಲಿ ಕ್ರಮ ಕೈಗೊಳ್ಳುವುದು ಸಹಜ.

* ಇನ್ಸ್ಪೆಕ್ಟರ್, ಪಿಎಸ್ಐ ಅಥವಾ ಎಸ್ಪಿ – ತಪ್ಪಿದ್ದರೆ ಕ್ರಮ ತಪ್ಪದೇ ಆಗುತ್ತದೆ.

* ಇಲಾಖೆ ಭದ್ರತಾ ಲೋಪಗಳನ್ನು ಗಂಭೀರವಾಗಿ ಪರಿಗಣಿಸುತ್ತದೆ.

ಸಿಟಿ ರವಿ–ಯತ್ನಾಳ್ ವಿರುದ್ಧ ಎಫ್ಐಆರ್ : ಪ್ರಚೋದನಾಕಾರಿ ಭಾಷಣದ ಪ್ರಕರಣದಲ್ಲಿ ಬಿಜೆಪಿಯ ಇಬ್ಬರು ಶಾಸಕರ ವಿರುದ್ಧ FIR ದಾಖಲಿಸಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್ –“ಕಾನೂನು ವಿರುದ್ಧ ನಡೆದುಕೊಂಡರೆ ಯಾರ ಮೇಲಾದರೂ ಕ್ರಮ ಕೈಗೊಳ್ಳುತ್ತೇವೆ. ಹಿಂದೂ ಆಗಲಿ, ಮುಸ್ಲಿಂ ಆಗಲಿ ಕಲ್ಲು ಎಸೆದರೆ ಕ್ರಮವಾಗುತ್ತದೆ. ಆದರೆ ಬಿಜೆಪಿಯವರು ಪ್ರಚೋದನಾಕಾರಿ ಭಾಷಣ ಮಾಡಿ ಜನರನ್ನು ಪ್ರಚೋದಿಸುತ್ತಿದ್ದಾರೆ. ಇದು ಸರಿಯಲ್ಲ”ಎಂದು ಹೇಳಿದರು.

ಧರ್ಮಸ್ಥಳ ಪ್ರಕರಣದ ಕುರಿತು

  • ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಎಸ್ಐಟಿಗೆ ನೀಡಿದ ಹೊಸ ದೂರಿನ ಬಗ್ಗೆ –ಎಸ್ಐಟಿಯವರು ದಾಖಲೆ ಪರಿಶೀಲಿಸಿ ತೀರ್ಮಾನ ಕೈಗೊಳ್ಳುತ್ತಾರೆ. ತನಿಖೆಗೆ ಸರ್ಕಾರದ ಅನುಮತಿ ಬೇಕಾದರೆ ಕೇಳಬಹುದು. ಸದ್ಯಕ್ಕೆ ಯಾವುದೇ ಮನವಿ ಸರ್ಕಾರಕ್ಕೆ ಬಂದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *