ಮ್ಯೂಸಿಕ್ ಮೈಲಾರಿ ಪ್ರಕರಣಕ್ಕೆ ಟ್ವಿಸ್ಟ್.

ಮ್ಯೂಸಿಕ್ ಮೈಲಾರಿ ಪ್ರಕರಣಕ್ಕೆ ಟ್ವಿಸ್ಟ್.

ಜನಪದ ಗಾಯಕ ಮ್ಯೂಸಿಕ್ ಮೈಲಾರಿ ಅ*ಚಾರ ಪ್ರಕರಣ ಕೇಸ್​​ಗೆ ಟ್ವಿಸ್ಟ್​​

ಬಾಗಲಕೋಟೆ : ಅಪ್ರಾಪ್ತೆ ಮೇಲೆ ಉತ್ತರ ಕರ್ನಾಟಕದ ಖ್ಯಾತ ಜನಪದ ಗಾಯಕ ಮ್ಯೂಸಿಕ್ ಮೈಲಾರಿ ಅತ್ಯಾಚಾರ ಪ್ರಕರಣ ಕೇಸ್​​ಗೆ ಟ್ವಿಸ್ಟ್​​ ಸಿಕ್ಕಿದೆ. ಸಂತ್ರಸ್ತೆಯದ್ದು ಎನ್ನಲಾದ ವಿಡಿಯೋವಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹೆಸರು ಕೆಡಿಸುವ ಉದ್ದೇಶದಿಂದ ನಾನು ಹಾಗೆಲ್ಲ ಹೇಳಿದ್ದೇನೆ, ನನ್ನದು ತಪ್ಪಾಗಿದೆ ಕ್ಷಮಿಸಿ ಎಂದು ಅಪ್ರಾಪ್ತೆ ಹೇಳಿರೋದು ವಿಡಿಯೋದಲ್ಲಿದೆ.

ಮ್ಯೂಸಿಕ್​​ ಮೈಲಾರಿ ಅಣ್ಣ, ಲತಾ, ಶ್ರಾವಣಿ ಮತ್ತು ಡ್ಯಾನ್ಸರ್​​ ರುಕ್ಕು ಬಗ್ಗೆ ನಾನು ಏನೇನೋ ಮಾತಾಡಿದ್ದೇನೆ. ಅವರ ಹೆಸರು ಕೆಡಿಸುವ ಜೊತೆಗೆ, ನಾನು ಹೆಸರು ಮಾಡುವ ಉದ್ದೇಶದಿಂದ ಆ ರೀತಿ ಹೇಳಿದ್ದು, ನನ್ನದು ತಪ್ಪಾಗಿದೆ. ನನ್ನ ಕ್ಷಮಿಸಿ ಎಂದು ಯುವತಿ ಕೈಮುಗಿದು ಹೇಳಿರುವ ದೃಶ್ಯಗಳು ವಿಡಿಯೋದಲ್ಲಿವೆ. ಅಪ್ರಾಪ್ತೆಯ ವಿರುದ್ದ ಮೈಲಾರಿ ಅಭಿಮಾನಿಗಳು ಹಳೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​​ಲೋಡ್​​ ಮಾಡಿದ್ದಾರೆ ಎನ್ನಲಾಗಿದೆ.

ವಿಡಿಯೋ ಬಗ್ಗೆ ಅಪ್ರಾಪ್ತೆ ಸ್ಪಷ್ಟನೆ

ಇನ್ನು ಕ್ಷಮೆ ಕೇಳಿರುವ ವಿಡಿಯೋ ವೈರಲ್​​ ಆಗುತ್ತಿದ್ದಂತೆ ಸಂತ್ರಸ್ತೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಾನು ಯುವಕನೊಬ್ಬನ ಜೊತೆ ಇರುವ ಮತ್ತು ತಪ್ಪಾಯಿತು ಎಂದು ಹೇಳಿರುವ ವಿಡಿಯೋ ಈಗಿನದ್ದಲ್ಲ. ನನ್ನ ಮೇಲೆ ಅತ್ಯಾಚಾರ ನಡೆದ ಬಳಿಕ ಎರಡನೇ ದಿನ ಮಾಡಿರೋದು. ಬೆಂಕಿ ಲತಾ ಡ್ಯಾನ್ಸರ್, ರುಕ್ಕು ಸಿಂಗರ್, ಡಿಜೆ ಮಾಂತೇಶ್ ಗೋಕಾಕ್​​ ಅವರು ಬಂದು ನನಗೆ ಹೊಡೆದು ಆ ವಿಡಿಯೋ ಮಾಡಿಸಿದ್ದರು. ಅದೇ ವಿಡಿಯೋವನ್ನೀಗ  ಕೆಲವರು ಇನ್​​ಸ್ಟಾಗ್ರಾಮ್​​ನಲ್ಲಿ ಎಡಿಟ್ ಮಾಡಿ ಹಾಕ್ತಿದಾರೆ. ಈ ರೀತಿ ವಿಡಿಯೋ ಶೇರ್​​​ ಮಾಡುತ್ತಿರುವವರ ವಿರುದ್ಧ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡುತ್ತೇನೆ. ನಾನೊಬ್ಬ ದಲಿತ ಹುಡುಗಿಯಾಗಿದ್ದು, ನನಗೆ ನ್ಯಾಯ ಬೇಕು. ಆ ವಿಡಿಯೋ ಈಗಿನದ್ದು ಅಂತ ಯಾರು ತಿಳಿದುಕೊಳ್ಳಬೇಡಿ. ನನಗೆ ನ್ಯಾಯ ಕೊಡಿಸಿ, ಸಪೋರ್ಟ್ ಮಾಡಿ ಎಂದು ಯುವತಿ ಕೈ ಮುಗಿದು ಕೇಳಿಕೊಂಡಿದ್ದಾಳೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *