ಮಂಡ್ಯ: ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯಲು ಮಚ್ಚು ಹಿಡಿದು “ಇದ್ರೆ ನೆಮ್ಮದಿಯಾಗ್ ಇರ್ಬೇಕ್” ಎಂದು ರೀಲ್ಸ್ ಮಾಡಿದ ಯುವಕನಿಗೆ ಮಂಡ್ಯ ಪೊಲೀಸರು ಸರಿಯಾಗಿ ಪಾಠ ಕಲಿಸಿದ್ದಾರೆ. ಕಾರಸವಾಡಿ ಗ್ರಾಮದ ಪವನ್ ಎಂಬಾತ ಈ ಡ್ರಾಮಾತ್ಮಕ ರೀಲ್ಸ್ ಮಾಡಿದ್ದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆತನ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
ಥಾಣೆಯ ಮುಂದೆ ಕ್ಷಮೆ ಕೇಳಿಸಿದ ಪವನ್
ಪವನ್ ತನ್ನ ರೀಲ್ಸ್‌ನಲ್ಲಿ ಮಾರಕಾಸ್ತ್ರ ಪ್ರದರ್ಶನ ಮಾಡುವ ಮೂಲಕ ಹಂಗಾಮಿ ಗ್ಯಾಂಗ್‌ಸ್ಟರ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ. ಈ ವಿಡಿಯೋ ವೈರಲ್ ಆದ ನಂತರ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಪವನ್‌ನನ್ನು ಬಂಧಿಸಿ ಥಾಣೆಯ ಮುಂದೆ ಕ್ಷಮೆ ಕೇಳುವಂತೆ ಮಾಡಿದ್ದಾರೆ.
ಆದಷ್ಟರಲ್ಲಿ ಪೊಲೀಸರು ಆತನ ಈ ರೀಲ್ಸ್‌ನ್ನೇ ಟ್ರೋಲ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪುನಃ ಹಂಚಿದ್ದು, ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ಪೋಲೀಸರಿಂದ ಪುಡಿರೌಡಿಗಳಿಗೆ ಖಡಕ್ ಎಚ್ಚರಿಕೆ
ಇಂತಹ “ಮಚ್ಚು ಸ್ಟೈಲ್ ರೀಲ್ಸ್” ಜನರಲ್ಲಿ ಭಯ ಹುಟ್ಟಿಸುವ ಸಾಧ್ಯತೆ ಇರುವುದರಿಂದ, ಮಂಡ್ಯ ಪೊಲೀಸರು ಈ ಮೂಲಕ ಎಲ್ಲ ಯುವಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
“ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗೋಕೆ ಫೋಸ್ ಕೊಡುವ ಕಾಲವೇ ಅಲ್ಲ; ಕಾನೂನು ಕಾಯ್ದು ಕೊಳ್ಳೋ ಕಾಲ!” ಎಂದು ಪೊಲಿಸ್ ಇಲಾಖೆ ಸ್ಪಷ್ಟ ಸಂದೇಶ ನೀಡಿದ್ದಾರೆ.
For More Updates Join our WhatsApp Group :