ಶಾಂತಿನಗರ ವಿ. ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಬೆಲೆ ಏರಿಕೆ  ಅಭಿಯಾನ

ಶಾಂತಿನಗರ ವಿ. ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಬೆಲೆ ಏರಿಕೆ ಅಭಿಯಾನ

ಆಮ್ ಆದ್ಮಿ ಪಕ್ಷದಿಂದ ಸತತ 10 ದಿವಸಗಳಿಂದ  ಕೇಂದ್ರದ ಬಿಜೆಪಿ ಹಾಗೂ ರಾಜ್ಯದ ಕಾಂಗ್ರೆಸ್ ಸರ್ಕಾರಗಳ ಬೆಲೆ ಏರಿಕೆ ನೀತಿಯನ್ನು  ವಿರೋಧಿಸಿ ನಡೆಯುತ್ತಿರುವ  ತುಘಲಕ್ ತೆರಿಗೆ ದರೋಡೆ ಅಭಿಯಾನವು ಇಂದು ನಗರದ ಶಾಂತಿನಗರ ವಿಧಾನಸಭಾ ಕ್ಷೇತ್ರದ ಅನೇಕ ಕಡೆಗಳಲ್ಲಿ ನಡೆಯಿತು.

ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಹಾಗೂ ಬೆಂಗಳೂರು ನಗರ ಮಾಧ್ಯಮ ಉಸ್ತುವಾರಿ ಅನಿಲ್ ನಾಚಪ್ಪ ನೇತೃತ್ವದಲ್ಲಿ ನಡೆದ ಅಭಿಯಾನವು ಬ್ರಿಗೇಡ್ ರಸ್ತೆ, ನೀಲಸಂದ್ರ , ವನ್ನಾರ್ ಪೇಟೆ, ಎಲ್.ಅರ್.ನಗರ, ದೊಮ್ಮಲೂರು ಇನ್ನಿತರ ಕಡೆ ಜನನಿಬಿಡ ಪ್ರದೇಶಗಳಲ್ಲಿ ಅಭಿಯಾನವನ್ನು ನಡೆಸಲಾಯಿತು. ಕ್ಷೇತ್ರದ ಸಾವಿರಾರು ಕಾರ್ಯಕರ್ತರುಗಳಿಗೆ ಬೆಲೆ ಏರಿಕೆ ಕರಪತ್ರವನ್ನು ನೀಡುವ ಮೂಲಕ ಪಕ್ಷದ ಜನಾಂದೋಲನದಲ್ಲಿ ಸಕ್ರಿಯಗೊಳ್ಳಬೇಕೆಂದು  ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ವಿನಂತಿಸಿಕೊಂಡರು.

ಜನಸಾಮಾನ್ಯರ ಧ್ವನಿಯಾಗಿ ಆಮ್ ಆದ್ಮಿ ಪಕ್ಷ ಎಂದಿಗೂ  ಹೋರಾಡುತ್ತದೆ. ನೀಚ ಸರ್ಕಾರಗಳು ಬೆಲೆ ಇಳಿಸುವ ತನಕ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು  ಅನಿಲ್ ನಾಚಪ್ಪ ತಿಳಿಸಿದರು.  ಅಭಿಯಾನದಲ್ಲಿ ಮಹಿಳಾ ಘಟಕದ ಅಧ್ಯಕ್ಷ ವೀಣಾ ಸರಾವ್, ಶಿವಕುಮಾರ್ ನಾಯ್ಡು, ಸರವಣ ಸೇರಿದಂತೆ ಅನೇಕ ಮುಖಂಡರುಗಳಾಗು ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *