ಕಾಮಿಡಿ ಜೊತೆ ಆಕ್ಷನ್ ಸಿನಿಮಾ ಆರಾಮ್ ಅರವಿಂದ ಸ್ವಾಮಿ

ಕಾಮಿಡಿ ಜೊತೆ ಆಕ್ಷನ್ ಸಿನಿಮಾ ಆರಾಮ್ ಅರವಿಂದ ಸ್ವಾಮಿ

ಅನೀಶ್ ಅಭಿನಯದ ‘ಆರಾಮ್ ಅರವಿಂದ ಸ್ವಾಮಿ’ ಮುಂದಿನ ವಾರ ತೆರೆಗೆ ಬರಲು ಸಜ್ಜಾಗಿರುವಂತೆಯೇ ಹೊಸ ಟ್ರೇಲರ್ ಬಿಡುಗಡೆಯಾಗಿದೆ. 2 ನಿಮಿಷ 14 ಸೆಕೆಂಡ್ ಗಳ ಟ್ರೇಲರ್ ಹಾಸ್ಯದ ಜೊತೆಗೆ ಎಮೋಷನ್, ಆಕ್ಷನ್ ಅಂಶಗಳ ಹೊರಣದೊಂದಿಗೆ ಗಮನ ಸೆಳೆಯುತ್ತಿದೆ.

ಚಿತ್ರವು ಅರವಿಂದ ಸ್ವಾಮಿಯನ್ನು ಪರಿಚಯಿಸುತ್ತದೆ. ಅವರು ಹೊರನೋಟಕ್ಕೆ ಆರಾಮವಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಅವರ ಜೀವನ ನೆಮ್ಮದಿಯಾಗಿ ಇರುವುದಿಲ್ಲ, ಟೆನ್ಶನ್, ಪ್ರಣಯ, ಕೌಟುಂಬಿಕ ಹಾಗೂ ಹಣಕಾಸಿನ ಅಡಚಣೆಯಿಂದ ಕೂಡಿರುತ್ತದೆ. ಇದು ಪ್ರೀತಿ, ಮದುವೆ, ಹಣ ಮತ್ತು ಕುಟುಂಬದ ಕುರಿತಾದ ಕಥೆಯಾಗಿದ್ದು, ಪಕ್ಕಾ ಫ್ಯಾಮಿಲಿ ಎಂಟರ್ ಟೈನರ್ ಸಿನಿಮಾ ಆಗಿದೆ.

786 ಫಿಲ್ಮ್ಸ್ ಮತ್ತು ಐಕ್ಯ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಶ್ರೀಕಾಂತ್ ಪ್ರಸನ್ನ ಮತ್ತು ಪ್ರಶಾಂತ್ ರೆಡ್ಡಿ ನಿರ್ಮಾಣದ ಈ ಚಿತ್ರವನ್ನು ಅಭಿಷೇಕ್ ಶೆಟ್ಟಿ ನಿರ್ದೇಶಿಸಿದ್ದಾರೆ. ಈ ಹಿಂದೆ ಅವರು ನಮ್ ಗಣಿ ಬಿಕಾಂ ಪಾಸ್ ಮತ್ತು ಗಜನಾನ ಅಂಡ್ ಗ್ಯಾಂಗ್ ನಿರ್ದೇಶಿಸಿದ್ದರು. ಇದು ಅವರ ಮೂರನೇ ಚಿತ್ರವಾಗಿದೆ. ವೃತ್ತಿ ಜೀವನದಲ್ಲಿ ನಾಯಕನಾಗಿ ಅನೀಶ್ ಗೆ ಆರಾಮ್ ಅರವಿಂದ ಸ್ವಾಮಿ ಒಂದು ಮಹತ್ವದ ತಿರುವು ನೀಡಲಿದೆ ಎಂಬ ನಿರೀಕ್ಷೆಯಿದೆ. ಪ್ರಣಯ, ಹಾಸ್ಯ ಸನ್ನಿವೇಶದಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಇವರ ಜೊತೆ ಮಿಲನಾ ನಾಗರಾಜ್ ಮತ್ತು ಹೃತಿಕಾ ಶ್ರೀನಿವಾಸ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು, ವಿಬಿ ಶಿವಸಾಗರ್ ಛಾಯಾಗ್ರಹಣ ಮತ್ತು ಉಮೇಶ್ ಆರ್ ಬಿ ಸಂಕಲನವಿದೆ.

Leave a Reply

Your email address will not be published. Required fields are marked *