ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಶೈಕ್ಷಣಿಕ ಕ್ಷೇತ್ರದ ಕಡೆಗಣನೆ ಹಾಗೂ ಸರ್ಕಾರಿ ಶಿಕ್ಷಣ ವ್ಯವಸ್ಥೆ ಹಾಗೂ ಸಂಸ್ಥೆಗಳ ಬಲವರ್ಧನೆಯಲ್ಲಿ ಉನ್ನತ ಶಿಕ್ಷಣ ಸಚಿವರ ದಿವ್ಯ ನಿರ್ಲಕ್ಷ್ಯವನ್ನು ಖಂಡಿಸುತ್ತೇವೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಕರ್ನಾಟಕ ದಕ್ಷಿಣ ಪ್ರಾಂತದ ಕಾರ್ಯದರ್ಶಿ ಪ್ರವೀಣ್ ಎಚ್ ಕೆ ತಿಳಿಸಿದರು.’

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಅಕ್ಕಮಹಾದೇವಿ, ರಾಯಚೂರು, ಕಲಬುರ್ಗಿ, ಧಾರವಾಡ, ನೃಪತುಂಗ ವಿಶ್ವವಿದ್ಯಾಲಯ ಹಾಗೂ ಪ್ರಿಯಾಂಕ ಖರ್ಗೆ ರವರ ಸ್ವ -ಹಿತಾಸಕ್ತಿಯ ಪರಿಣಾಮ, ರಾಜ್ಯಪಾಲರ ಅಧಿಕಾರ ಮೋಟಕುಗೊಳಿಸಿ ಮುಖ್ಯಮಂತ್ರಿಗಳಿಗೆ ಪರಮಾಧಿಕಾರ ನೀಡುವ ಸಲುವಾಗಿ ರಾಜ್ಯದ ಏಕೈಕ ಗ್ರಾಮೀಣ ಅಭಿವೃದ್ಧಿ ವಿವಿ ಆರ್ ಡಿ ಪಿ ಆರ್ ವಿಶ್ವವಿದ್ಯಾಲಯವು ಕೂಡ ಕಳೆದೊಂದು ವರ್ಷದಿಂದ ಉಪ ಕುಲಪತಿಗಳ ನೇಮಕವಾಗದೆ ಸಮರ್ಪಕ ಆಡಳಿತ ನೀಡುವುದು ದುಸ್ತರವಾಗಿದೆ, ಸಂಶೋಧನಾ ಆಧಾರಿತ ವಿಶ್ವವಿದ್ಯಾಲಯಗಳಾಗಿ ಹೆಗ್ಗಳಿಕೆ ಹೊಂದಬೇಕಾಗಿದ್ದ ನಮ್ಮ ಶೈಕ್ಷಣಿಕ ಸಂಸ್ಥೆಗಳು ಭ್ರಷ್ಟಾಚಾರದ ಕೇಂದ್ರಗಳಾಗುತ್ತಿರುವುದು ದುರ್ವಿಧಿ ಎಂದು ಕಳವಳ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿನ ಬಹುತೇಕ ಸರ್ಕಾರಿ ಇಂಜಿನಿಯರಿAಗ್ ಕಾಲೇಜುಗಳು ಬೋಧಕರಿಲ್ಲದೆ, ಪ್ರಾಯೋಗಿಕ ಉಪಕರಣಗಳಿಲ್ಲದೇ, ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೆ ಬಡವರಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಕಾಯಕಲ್ಪ ನೀಡಬೇಕೆಂದು ಒತ್ತಾಯಿಸಿದರು.
ವಿದ್ಯಾರ್ಥಿ ವೇತನ ಮತ್ತು ವಿದ್ಯಾರ್ಥಿ ನಿಲಯ ಅಸಮರ್ಪಕ ನಿರ್ವಹಣೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಗೆ ಧಕ್ಕೆ, ರಾಜ್ಯದ ವಿಶ್ವವಿದ್ಯಾಲಯಗಳಲ್ಲಿನ ಯುಯುಸಿಎಂಎಸ್ ತಂತ್ರಾAಶದ ಕುರಿತಾಗಿರುವ ಸಮನ್ವಯದ ಕೊರತೆ ನೀಗಿಸಿ, ಬಳಕೆದಾರರ ಸ್ನೇಹಿ ತಂತ್ರಾAಶವಾಗಿ ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದರು.
ಒಟ್ಟಾರೆಯಾಗಿ ಕರ್ನಾಟಕ ರಾಜ್ಯದ ವಿಶ್ವವಿದ್ಯಾಲಯಗಳ ಪರಿಸ್ಥಿತಿ ಹಾಗೂ ಉನ್ನತ ಶಿಕ್ಷಣ ವ್ಯವಸ್ಥೆಯು ಸಂಪೂರ್ಣವಾಗಿ ಗೊಂದಲಮಯವಾಗಿದ್ದರು ಕೂಡ ರಾಜ್ಯದ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ ಸುಧಾಕರ್ ಅವರು ನಿಷ್ಕ್ರಿಯರಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಗಳಿಗೆ ಬದ್ಧತೆ ತೋರದೆ, ಉನ್ನತ ಶಿಕ್ಷಣ ಇಲಾಖೆಗೆ ಯಾವುದೇ ಹೊಸತನವನ್ನು ತರದೆ ಕಾಣೆಯಾಗಿರುವುದು ವಿದ್ಯಾರ್ಥಿಗಳಲ್ಲಿ ನಿರಾಸೆ ಮೂಡಿಸಿದೆ. ಈ ರಾಜ್ಯದ ಶೈಕ್ಷಣಿಕ ವಿಚಾರಗಳಲ್ಲಿ ಸರ್ಕಾರದ ದಿವ್ಯ ನಿರ್ಲಕ್ಷ್ಯ ಧೋರಣೆ ಮುಂದುವರೆದರೆ ವಿದ್ಯಾರ್ಥಿ ಪರಿಷತ್ ರಾಜ್ಯಾದ್ಯಂತ ತೀವ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಈ ವೇಳೆ ಅಭಿನಂದನ್, ವಿಜಯಕೃಷ್ಣ, ಪ್ರೀತಿ ವಿ ಆರಾಧ್ಯ ಉಪಸ್ಥಿತರಿದ್ದರು.