ಬೆಂಗಳೂರು: ಯುವಕನ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಆ್ಯಸಿಡ್ ನಂತಹ ಬಾತ್ ರೂಮ್ ಕ್ಲೀನರ್ ಎರಚಿರುವ ಘಟನೆ ಸೆ.22ರಂದು ಮಧ್ಯಾಹ್ನ 3 ಗಂಟೆಯ ಸಮಯಯದಲ್ಲಿ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ಸಣ್ಣಕ್ಕಿ ಬಯಲಿನ ವೈನ್ಸ್ ಸ್ಟೋರ್ ಬಳಿ ನಡೆದಿದೆ. ಆ್ಯಸಿಡ್‌ನಿಂದ ನಾಗೇಶ್ ಕೊಂಡಾ (21) ಎಂಬವರ ತೀವ್ರವಾಗಿ ಬಳಲುತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಪರಾರಿಯಾಗಿದ್ದಾನೆ.
ವೃಷಭಾವತಿ ನಗರದಲ್ಲಿರುವ ಕಂಪನಿಯೊAದರಲ್ಲಿ ಫಿಟ್ಟರ್ ಆಗಿ ನಾಗೇಶ್ ಕೆಲಸ ಮಾಡುತ್ತಿದ್ದರು. ಸೆ.22 ಕೆಲಸಕ್ಕೆ ರಜೆ ಇದ್ದ ಹಿನ್ನೆಲೆಯಲ್ಲಿ ಬಾರ್‌ಗೆ ಬಂದು ಮದ್ಯಪಾನ ಮಾಡಿ, ಊಟ ಮುಗಿಸಿ ಮನೆಗೆ ಹೊರಟಿದ್ದರು. ಈ ವೇಳೆ ಬಾರ್ ಬಳಿ ಬಂದ ದುಷ್ಟ ನಾಗೇಶ್ ಮುಖಕ್ಕೆ ಕೆಮಿಕಲ್ ಎರಚಿ ಪರಾರಿಯಾಗಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುವಿನ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.